
ಇಂದು ಸಂಜೆ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಬಿ ಜೆ ಪಿ ನಾಯಕ, ಮಾಜೀ ಜಿ ಪಂ ಸದಸ್ಯ ನವೀನ್ ರೈ ಅಗಲಿಕೆ ಸುಳ್ಯದವರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ ಎಲ್ಲರ ಒಡನಾಡಿಯಾಗಿದ್ದು ರಾಜಕೀಯ ಮಾತ್ರವಲ್ಲದೆ ಧಾರ್ಮಿಕ, ಮತ್ತು ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ನವೀನ್ ರೈ ಅವರ ಹಠಾತ್ ಸಾವಿನ ಸುದ್ದಿ ತಿಳಿದು ಪಕ್ಷಾತೀತವಾಗಿ ಎಲ್ಲಾ ಗಣ್ಯರು ಕಂಬನಿ ಮಿಡಿದಿದ್ದಾರೆ.ನವೀನ್ ದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರಗೆ ಪೋಸ್ಟ್ ಮಾರ್ಟಂ ಗೆ ತಂದು ಸುಳ್ಯದ ಬಿ ಜೆ ಪಿ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು,ಮಾಜೀ ಸಚಿವ ಎಸ್ ಅಂಗಾರ , ಶಾಸಕಿ ಭಾಗೀರಥಿ ಮುರುಳ್ಯ, ಬಿ ಜೆಪಿ ಮಂಡಲ ಅದ್ಯಕ್ಷ ಹರೀಶ ಕಂಜಿಪಿಲಿ,ಎಸ್ ಎನ್ ಮನ್ಮಥ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಕಾಂಗ್ರೇಸ್ ಮುಖಂಡ ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಎನ್ ಎ ರಾಮಚಂದ್ರ, ಹರೀಶ್ ರೈ, ಚನಿಯಕಲ್ತಡ್ಕ, ನಗರಪಂಚಾಯತ್ ಸದಸ್ಯರು ಹಾಗೂ ನೂರಾರು ಮಂದಿ ನವೀನ್ ದೇಹದ ಅಂತಿಮ ದರ್ಶನ ಮಾಡಿದರು ಬಳಿಕ ಅವರ ಮನೆ ಮೇನಾಲಕ್ಕೆ ಕೊಂಡೊಯ್ಯಲಾಯಿತು, ಅವರ ನಿಧನಕ್ಕೆ ಕೆ ಪಿ ಸಿ ಸಿ ಮುಖ್ಯ ವಕ್ತಾರ ಟಿ ಎಂ ಶಹೀದ್ ತೆಕ್ಕಿಲ್ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.


ಪುಟ್ವಾಲ್ನಲ್ಲಿರುವ ಕಸ ತೆಗೆಯಲೆಂದು ತೆರಳಿದ್ದ ನವೀನ್ ರೈ.
ನವೀನ್ ರೈಯವರ ಮನೆ ಮೇನಾಲದಲ್ಲಿದ್ದು, ಅವರಿಗೆ ತುದಿಯಡ್ಕ ಸಮೀಪದಲ್ಲಿ ಅಡಿಕೆ ತೋಟವಿದೆ. ಅದರ ಇನ್ನೊಂದು ಪಾರ್ಶ್ವದಲ್ಲಿ ಪಯಸ್ವಿನಿ ಹೊಳೆಗೆ ನೀರಿನ ಪಂಪ್ ಅಳವಡಿಲಾಗಿದ್ದು, ನವೀನ್ ರೈಯವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಇಂದು ಪುಟ್ವಾಲ್ನಲ್ಲಿರುವ ಕಸ ತೆಗೆಯಲೆಂದು ಅಲ್ಲಿಗೆ ಹೋಗಿದ್ದರು.ನದಿಯ ದಡದಲ್ಲಿ ಮೊಬೈಲ್, ವಾಚ್ ಮತ್ತಿತರ ಸಾಮಾನುಗಳನ್ನಿರಿಸಿ ನದಿಗಿಳಿದಿದ್ದರು. ಬಹಳ ಹೊತ್ತಾದರೂ ನವೀನ್ ರೈಯವರು ಮರಳಿ ಬಾರದ್ದರಿಂದ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಿಗೆ ಅನುಮಾನದಿಂದ ನವೀನ್ ರೈ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ .
ಪೈಚಾರಿನ ಮುಳುಗು ತಜ್ಞರಿಗೂ ಮಾಹಿತಿ ಹೋಗಿ ಅವರು ಧಾವಿಸಿ ಬಂದರು. ಅಗ್ನಿಶಾಮಕ ದಳದವರು ಕೂಡಾ ಸ್ಥಳಕ್ಕೆ ಬಂದರು.
ಸ್ಥಳಕ್ಕೆ ಬಂದ ಮುಳುಗು ತಜ್ಞರ ತಂಡ ಶೋಧ ನಡೆಸಿದಾಗ ಸ್ವಲ್ಪ ದೂರದ ಆಳದಲ್ಲಿ ನವೀನ್ ರೈಯವರ ಮೃತದೇಹ ಪತ್ತೆಯಾಯಿತು.
ಹೊಳೆಯಲ್ಲಿ ಕೆಸರು ತುಂಬಿದ್ದು ಕಾಲು ಹೂತು ಹೋಗಿ ಮೇಲೆ ಬರಲಾಗದೆ ನವೀನ್ ರೈ ಸಾವನ್ನಪ್ಪಿರಬಹುದು ಅಂದಾಜಿಸಲಾಗಿದೆ.
ಪತ್ನಿ ರೂಪಾ ರೈ, ಪುತ್ರಿ ಪೃಥ್ವಿ ರೈ, ಆರ್ವಿ ರೈ ಯವರನ್ನು ಅಗಲಿದ್ದಾರೆ.
