
ಸುಳ್ಯ ತಾಲೋಕಿನ ಕೋಲ್ಚಾರ್ ತರವಾಡು ಮನೆ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ಇಂದು ಸಂಪನ್ನಗೊಂಡಿದೆ,ಮೂರು ದಿನಗಳಿಂದ ಅದ್ಧೂರಿಯಾಗಿ ನಡೆದ ಈ ಅಪರೂಪದ ದೈವಕಟ್ಟು ಮಹೋತ್ಸವಕ್ಕೆ ಸಾವಿರಾರು ಭಕ್ತಾದಿಗಳಿ ಸಾಕ್ಷಿಯಾಗಿದ್ದಾರೆ, ಕೋಲ್ಚಾರಿನಲ್ಲಿ ಸುಮಾರು 60 ವರ್ಷಗಳ ಹಿಂದೆ ನಡೆದಿರಬಹುದು ಎಂದು ಹೇಳಲಾದ ಉತ್ಸವ ಈ ವರ್ಷ ಅದ್ಧೂರಿಯಾಗಿ ನಡೆಸಿರುವ ಕೋಲ್ಚಾರು ಕುಟುಂಭಸ್ಥರು ಶಿವ ಸಂಭೂತನಾದ ವಯನಾಟ್ ಕುಲವನ್ ಕೃಪೆಗೆ ಪಾತ್ರರಾದರು, ಕೇರಳದ ಮೂಲ ಧಾರ್ಮಿಕ ಪರಂಪರೆ ಹೊಂದಿರುವ ಈ ದೈವಕಟ್ಟು ಮಹೋತ್ಸವಕ್ಕೆ ಕೇರಳ ಹಾಗೂ ಕರ್ನಾಟಕದ ವಿವಿಧ ಕಡೆಗಳಿಂದ ಭಕ್ತರ ಸಾಗರ ಹರಿದು ಬಂದಿತ್ತು .



ಮೇ.18ರ ಇಂದು ಬೆಳಗ್ಗಿನಿಂದ ಕಾರ್ನೊನ್ ದೈವ, ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು ನಂತರ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆದು. ವಯನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ ದೈವಗಳ ಅಪೂರ್ವ ಸಮಾಗಮ ನಡೆಯಿತು,

ರಾತ್ರಿ ದೈವಂಕಟ್ಟು ಮಹೋತ್ಸವದಲ್ಲಿ ಮರ ಪಿಳರ್ಕಲ್ ನಡೆಯಿತು ,ಕೈವೀದ್ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅದ್ಯಕ್ಷ ಪುರುಷೋತ್ತಮ ಕೋಲ್ಚಾರು, ಶ್ರೀ ತಂಬುರಾಟಿ ಭಗವತಿ ಕ್ಷೇತ್ರ, ಕುತ್ತಿಕೋಲು ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ ,ಉತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ ಕುಟುಂಬದ ಯಜಮಾನ ಕೂಸಪ್ಪ ಗೌಡ ಕೋಲ್ಚಾರು ,ಸಂಚಾಲಕರಾದ ಸೋಮಶೇಖರ ಕ್ಯೂಂಗಾಜೆ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೊಯಿಂಗಾಜೆ ಉಪಾಧ್ಯಕ್ಷರುಗಳಾದ, ರೂಪಾನಂದ ಕೋಲ್ಚಾರು , ಶಿವಣ್ಣ ಕೋಲ್ಚಾರು, ಶ್ಯಾಮ ಸುಂದರ ಕೋಲ್ಚಾರು ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು ಕೋಶಾಧಿಕಾರಿ ಶಿವಪ್ರಸಾಧ್ ಕೋಲ್ಚಾರು, ಆಡಳಿತ ಸಮಿತಿ ಕಾರ್ಯದರ್ಶಿ ರಾಮಪ್ಪ ಮಾಸ್ತರ್ ಕೋಲ್ಚಾರು, ಆಡಳಿತ ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಶ್ರಿ ತಂಬುರಾಟಿ ಭಗವತಿ ಆಲೆಟ್ಟಿ ಪ್ರಾದೇಶಿಕ ಸಮಿತಿ ಅದ್ಯಕ್ಷ ನಾರಾಯಣ ಬಾರ್ಪಣೆ ,ಸ್ಥಾನದ ಮನೆ ಅರ್ಚಕ ದಾಮೋದರ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಕಾರ್ಯದರ್ಶಿ ನಾಗವೇಣಿ ಕೋಲ್ಚಾರು, ಖಜಾಂಜಿ ಗೋವರ್ಧಿನಿ ಕೋಲ್ಚಾರು, ಹಾಗೂ ಉಪಸಮಿತಿಗಳ ಸದಸ್ಯರುಗಳು,ಕೋಲ್ಚಾರು ಕುಟುಂಬಸ್ಥರು ಉಪಸ್ಥಿತರಿದ್ದರು.

