ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಾತಿ ಮತ ಪಕ್ಷ ಬೇದ ಶ್ರಮಿಸುತ್ತೇವೆ: ಜಿ. ಕೃಷ್ಣಪ್ಪ.

ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಾತಿ ಮತ ಪಕ್ಷ ಬೇದ ಶ್ರಮಿಸುತ್ತೇವೆ: ಜಿ. ಕೃಷ್ಣಪ್ಪ.

ಸುಳ್ಯ: ರಾಜ್ಯದಾದ್ಯಂತ ಆಡಳಿತ ವಿರೋಧಿ ಅಲೆ ಇತ್ತು‌.‌ಸುಳ್ಯದಲ್ಲೂ ಗ್ರಾಮಗಳಲ್ಲಿ ಜನರ ಅಭಿಪ್ರಾಯವೂ ಇದೇ ಆಗಿತ್ತು ಆದರೆ ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿ ,ಮತ ವಿಭಜಿಸುವಲ್ಲಿ ಯಶಸ್ವಿಯಾಯಿತು, ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರ ಇರುವ ಕಾರಣ ಸುಳ್ಯದಲ್ಲೂ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತಿದ್ದರೆ ಸುಳ್ಯದ ಅಭಿವೃದ್ದಿಗೆ ಸಹಕಾರಿಯಾಗಿತ್ತು, ಈ ಸೋಲಿನಿಂದ ಬೇಸರವಿಲ್ಲ, ಸೋತರೂ ಕ್ಷೇತ್ರದಲ್ಲಿದ್ದುಕೊಂಡು ಜನರ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ನ ಸುಳ್ಯದ ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ ಹೇಳಿದ್ದಾರೆ ಅವರು ಮಂಗಳವಾರ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಹಕರಿದವರಿಗೆ ಅಭಿನಂದನೆ ಸಲ್ಲಿಸಿದರು .
ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪೂರ್ಣ ಈಗ ಶಾಸಕಿಯಾಗಿರುವ ವವರಿಗೆ ಪ್ರಮಾಣದಲ್ಲಿ ಸಹಕರಿಸುತ್ತೇವೆ, ಅಭಿವೃದ್ದಿಯಲ್ಲಿ ರಾಜಕೀಯ ತಂದರೆ ವಿರೋದ ಮಾಡಲು ಹೇಸುವವರಲ್ಲ ಎಂದು ಸುಳ್ಯದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ನೂತನ ಶಾಸಕಿ ಭಾಗೀರಥಿ ಮುರುಳ್ಯರಿಗೆ ಅಭಿನಂದನೆ ಸಲ್ಲಿಸಿದರು.


ಸುಳ್ಯದಲ್ಲಿ ನಾವು ನಿರೀಕ್ಷಿಸದ ರೀತಿಯಲ್ಲಿ ಫಲಿತಾಂಶ ಬಂದಿದೆ. ಜನಾಭಿಪ್ರಾಯಕ್ಕೆ ತಲೆಬಾಗುತ್ತೇವೆ. ನಾವು ಎಡವಿದ್ದೆಲ್ಲಿ ಎಂದು ಯೋಚಿಸಿ ತಿದ್ದಿಕೊಂಡು ಮುಂದಿನ ಚುನಾವಣೆಗೆ ಸಿದ್ಧರಾಗುತ್ತೇವೆ. ನಮ್ಮ ಸರಕಾರ ನೀಡಿರುವ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದರು.
ಕ್ಷೇತ್ರದಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗದಂತೆ, ಭ್ರಷ್ಟಾಚಾರ ನಡೆಯದಂತೆ ನಾವು ಇಲಾಖೆಗಳ ಮೇಲೆ ನಿಗಾ ಇರಿಸುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು.
ಕಾಂಗ್ರೆಸ್ ರಾಜ್ಯ ವಕ್ತಾರ ಟಿ.ಎಂ.ಶಹೀದ್, ತಾಲೂಕು ಪ್ರಚಾರ ಸಮಿತಿ ಸಂಚಾಲಕ ಸದಾನಂದ ಮಾವಜಿ, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ರಾಜೀವಿ ಆರ್. ರೈ, ಪಿ.ಎಸ್.ಗಂಗಾಧರ್, ಕಳಂಜ ವಿಶ್ವನಾಥ ರೈ, ಕೆ.ಎಂ. ಮುಸ್ತಫಾ, ಸಿದ್ದೀಕ್ ಕೊಕ್ಕೋ, ಕೀರ್ತನ್ ಕೊಡಪಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಜ್ಯ