
ಮನೆ ಮನೆಗಳಲ್ಲಿ ಮಕ್ಕಳಿಗೆ ದ್ಯೇಯ ಹಾಗೂ ಧರ್ಮ ಸಂಸ್ಕೃತಿ ಆಚಾರ ವಿಚಾರಗಳ ತಿಳಿಸುವ ಕೆಲಸವಾಗಬೇಕು:ಎ ಎಸ್ ನಿರ್ಮಲ ಕುಮಾರ್ .


ಶ್ರದ್ಧೆ ಭಕ್ತಿಯಿಂದ ದೇವರಕಾರ್ಯವನ್ನು ಮಾಡಿದರೆ ಶ್ರೇಯಸ್ಸು ಜೊತೆಯಾಗಿರುವುದು,ಸಮಾಜ ಮುಖಿ ಕೆಲಸದಿಂದ ಸಾಧಕರಾಗಲು ಸಾಧ್ಯವಿದೆ. ಮುಂದಿನ ಪೀಳಿಗೆಗೆ ಸೇವೆಯೆಂಬ ಧೈಯ ಹಾಗೂ ಧರ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಸುವ ಕೆಲಸವನ್ನು ಮಾಡುವುದರ ಮೂಲಕ ನಮ್ಮ ಧಾರ್ಮಿಕ ಪದ್ದತಿಗಳು ಚಿರಸ್ಥಾಯಿಯಾಗಲು ಹಿರಿಯರು ಮಾರ್ಗದರ್ಶನ ಮಾಡಬೇಕಾಗಿದೆ. ಜೀವನದಲ್ಲಿ ಪರೋಪಕಾರದ ಚಿಂತನೆ ಅಳವಡಿಸಿಕೊಂಡರೆ ಭಗವಂತನ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಪರಶಿವನ ಅವಾತಾರ ವಯನಾಟ್ ಕುಲವನ್, ಇಂದು ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ನಡೆಯುತ್ತಿದ್ದು, ಶಿವ ಸಂಭೂತನ ಆಶೀರ್ವಾದ ಗ್ರಾಮಸ್ಥರ ಮೇಲಿರಲಿ ಎಂದು ಉಪನ್ಯಾಸ ನೀಡಿದರು. ಅವರು ಕೋಲ್ಚಾರು ಕುಟುಂಬಸ್ಥರ ತರವಾಡು ಮನೆಯಲ್ಲಿ ನಡೆಯುತ್ತಿರುವ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿ ಕೋಲ್ಚಾರು ಕುಟುಂಬದ ಹಿರಿಯರಾದ ರಾಮಪ್ಪ
ಗೌಡ ಕೋಲ್ಚಾರು ಬಿಲ್ಲರಮಜಲು, ನಿವೃತ್ತ ಶಿಕ್ಷಕ ರಾಮಪ್ಪ ಮಾಸ್ತರ್ ಕೋಲ್ಚಾರು,ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ
ಕೋಲ್ಚಾರು, ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಸಂಚಾಲಕ ಸೋಮಶೇಖರ ಕೊಯಿಂಗಾಜೆ, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಕಣ್ಣ ಬೇಡಗ, ಸ್ಥಾನಿಕರಾದ ರಾಮಚಂದ್ರ ಬೆಳ್ಚಪ್ಪಾಡ ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು,ಸಮಿತಿ ಸಂಚಾಲಕ ಹರೀಶ್ ಕೊಯಿಂಗಾಜೆ, ,ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ, ಮೊದಲಾದವರು ಉಪಸ್ಥಿತರಿದ್ದರು. ವಿನಿತ್ ಕೋಲ್ಚಾರು ಪ್ರಾರ್ಥಿಸಿ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು ಸ್ವಾಗತಿಸಿದರು. ಪದ್ಮ ಕೋಲ್ಚಾರು ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು ವಂದಿಸಿದರು.
