ಪುತ್ತೂರಿನ ಹಿಂದುತ್ವದ ಫೈರ್ ಬ್ರಾಂಡ್ ಈಗ ಕರಾವಳಿಯ ವೈರಲ್ ಕಿಂಗ್ : ಜೋರಾಗುತ್ತಿರುವ ಪುತ್ತಿಲಾ ಹವಾಕ್ಕೆ ಬೆಚ್ಚಿ ಬೀಳುತ್ತಿವೆ ಬಿ ಜೆ ಪಿ ಯಾದಿಯಾಗಿ ಎಲ್ಲಾ ರಾಜಕೀಯ ಪಕ್ಷಗಳು.

ಪುತ್ತೂರಿನ ಹಿಂದುತ್ವದ ಫೈರ್ ಬ್ರಾಂಡ್ ಈಗ ಕರಾವಳಿಯ ವೈರಲ್ ಕಿಂಗ್ : ಜೋರಾಗುತ್ತಿರುವ ಪುತ್ತಿಲಾ ಹವಾಕ್ಕೆ ಬೆಚ್ಚಿ ಬೀಳುತ್ತಿವೆ ಬಿ ಜೆ ಪಿ ಯಾದಿಯಾಗಿ ಎಲ್ಲಾ ರಾಜಕೀಯ ಪಕ್ಷಗಳು.

ಪುತ್ತೂರಿನ ಹಿಂದುತ್ವದ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಈಗ ಕರಾವಳಿಯ ವೈರಲ್ ಕಿಂಗ್ .
ಹೌದು.. ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅರುಣ್ ಕುಮಾರ್ ಪುತ್ತಿಲರದ್ದೇ ಸುದ್ದಿ ವ್ಯಾಟ್ಸಾಪ್ ಇರಲಿ , ಪೇಸ್ ಬುಕ್ ಇರಲಿ ಇನ್ಸ್ಟಾಗ್ರಾಂ ಇರಲಿ ..ಎಲ್ಲಾ ಕಡೆ ಪುತ್ತಿಲ ..ಪುತ್ತಿಲ..
ಕಳೆದ ಮೂರು ನಾಲ್ಕು ದಶಕಗಳಿಂದ ಪುತ್ತೂರಿನಲ್ಲಿ ಹಿಂದುತ್ವಕ್ಕಾಗಿ ತನ್ನ ಬದುಕ ಮುಡಿಪಾಗಿಸಿದ ಅರುಣ್ ಕುಮಾರ್ ಮೊನ್ನೆ ಮೊನ್ನೆ ಅಮಿತ್ ಷಾ ಪುತ್ತೂರಿಗೆ ಬರುವವರೆಗೂ ಬಿ ಜೆ ಪಿ ಪಾಲಿಗೆ ಆಪತ್ಬಾಂಧವರಾಗಿದ್ದರು, ಯಾವಗ ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ಪುತ್ತೂರಿನ ದರ್ಬೆಯಲ್ಲಿ ಶುಭಕೋರುವ ಅತಿ ದೊಡ್ಡ ಬ್ಯಾನರ್ ಅಳವಡಿಸಿದ್ದರೋ ಅವತ್ತು ಬಿಜೆಪಿ ಯವರ ಕೆಂಗಣ್ಣಿಗೆ ಗುರಿಯಾಗಿತ್ತು, ಮಾಧ್ಯಮದೆದುರು ಮಳೆಗಾಲದಲ್ಲಿ ಅರಳುವ ಅಣಬೆ ಎಂದು ಅರುಣ್ ಕುಮಾರ್ ವಿರುದ್ದ ಹೀಗೆಳೆಯತೊಡಗಿದರು…

ಆಗಲೇ ಅರುಣ್ ಪುತ್ತಿಲ ಮತ್ತು ಅವರ ಅಭಿಮಾನಿಗಳು ವ್ಯಾಘ್ರರಾಗಿದ್ದರು , ಆದರೂ ಸೈರಿಸಿಕೊಂಡು ಎರಡು ತಿಂಗಳುಗಳು ಕಳೆದಿದ್ದರು. ಪುತ್ತೂರಿನಲ್ಲಿ ಬಿಜೆಪಿ ಯಿಂದ ಹೊಸ ಅಭ್ಯರ್ಥಿ ಯಾರೆಂದು ಹುಡಕತೊಡಗಿದಾಗ ಭಲವಾಗಿ ಕೇಳಿ ಬಂದ ಹೆಸರೇ ಹಿಂದುತ್ವದ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ..

ಆದರೆ ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲರಿಗೆ ಟಿಕೆಟ್ ನೀಡುವುದು ಸುತಾರಾಂ ಇಷ್ಟವಿರಲಿಲ್ಲ, ಹಾಗಾಗಿ ಪುತ್ತೂರಿನಲ್ಲಿ ಜನ ಸಂಖ್ಯೆ ಆದಾರದ ಮೇಲೆ ಒಕ್ಕಲಿಗ ಅಭ್ಯರ್ಥಿ ಆಶಾ ತಿಮ್ಮಪ್ಪರಿಗೆ ಟಿಕೆಟ್ ನೀಡಿತ್ತು, ಇದು ಅರುಣ್ ಕುಮಾರ್ ವ್ಯಕ್ತಿತ್ವವನ್ನೆ ಅಣಕ ಮಾಡುವಂತಿತ್ತು..ಇದು ಬಿಜೆಪಿ ಎದುರೇ ಬಂಡಾಯವಾಗಿ ಸ್ಪರ್ಧೆ ಮಾಡಲು ಕಾರಣವಾಯಿತು ಅಸಂಖ್ಯ ಸಂಖ್ಯೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳು ಸೇರಿಕೊಂಡರು ತಮ್ಮ ನಾಯಕನಿಗೆ ತಮ್ಮದೇ ಪಕ್ಷದಿಂದ ಆದ ಅನ್ಯಾಯದ ವಿರುದ್ದ ತೊಡೆ ತಟ್ಟಿ ನಿಂತರು.ತನ್ನ ನಾಯಕನಿಗೆ ನೆರಳಾಗಿ ನಿಂತರು ದುಡಿದರು‌… ದಣಿದರು..ಅರುಣ್ ಗೆಲುವಿಗೆ ತನು ಮನ ಧನಗಳನ್ನು ವಿನಿಯೋಗಿಸಿದರು .ಬಿ ಜೆ ಪಿ ಹಾಗು ಸಂಘ ಪರಿವಾರದ ಹಿರಿಯರನ್ನೇ ಎದುರು ಹಾಕಿ ಕೊಂಡರು.ಅಂತಿಮವಾಗಿ ಅರುಣ್ ಪುತ್ತಿಲ ಬಿಜೆಪಿಯನ್ನೇ ಹಿಂದಿಕ್ಕಿ ಎದುರಾಳಿ ಪಕ್ಷದ ಕಾಂಗ್ರೇಸ್ ಅಭ್ಯರ್ಥಿ , ಬಾಲ್ಯದ ಗೆಳೆಯನಿಗೆ ಪ್ರಭಲ ಸ್ಪರ್ಧೆಯನ್ನು ಒಡ್ಡಿದರು ಕೇವಲ 2673 ಮತಗಳಿಂದ ವೀರೋಚಿತ ಸೋಲನ್ನಭವಿಸಿದರು..

ಇಲ್ಲಿಗೆ ಎಲ್ಲಾ ಮುಗಿಯಿತು ಎಂದ ಬಾವಿಸಿದವರಿಗೆ ಮತ್ತೆ ಹೊಸ ಸಾವಾಲ್….

ಇಲ್ಲಿಗೆ ಎಲ್ಲಾ ಮುಗಿಯಿತು ಎಂದ ಬಾವಿಸಿದವರಿಗೆ ಮತ್ತೆ ಹೊಸ ಸಾವಾಲು ಎದುರಾಗಿದೆ ಕಾರಣ ಆರುಣ್ ಕುಮಾರ್ ಪುತ್ತಿಲ ಹೆಸರು ಈಗ ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಚಾಲ್ತಿಯಲ್ಲಿದೆ ಇದೇ ಒಳ್ಳೆ ಸಮಯವೆಂದು ಅವರ ಅಭಿಮಾನಿಗಳು ಇದೀಗ ಹೊಸ ದಾಳವನ್ನು ಎಸೆಯಲು ಆರಂಭಿಸಿದ್ದಾರೆ, ಜಿಲ್ಲೆಯ ಸಂಸದ ಅಭ್ಯರ್ಥಿಯಾಗಿ ಬಿಜೆಪಿ ಅರುಣ್ ಕುಮಾರ್ ಪುತ್ತಿಲರಿಗೇ ಟಿಕೆಟ್ ನೀಡುವಂತೆ ಪ್ರಧಾನ ಮೋದಿಯವರಿಗೆ ಮೈಲ್ ಚಳುವಳಿ ಪತ್ರ ಚಳುವಳಿ ಆರಂಭಿಸಿದ್ದಾರೆ, ಹೊಸ ಹೊಸ ಆ್ಯಪ್ ಮತ್ತು ವ್ಯಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಹತ್ತೂರಿಗೆ ಪುತ್ತಿಲ ಚಳುವಳಿ ಆರಂಭಿಸಿದ್ದಾರೆ.

ಇವೆಲ್ಲವನ್ನು ರಾಜಕೀಯ ಪಕ್ಷಗಳು ಹೇಗೆ ಪರಿಗಣನೆಗೆ ತೆಗೆದು ಕೊಳ್ಳುತ್ತದೆ ಕಾದು ನೋಡಬೇಕಾಗಿದೆ.

ರಾಜ್ಯ