
ಉಡುಪಿ: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತದಾನ ಕೇಂದ್ರಕ್ಕೆ ಆಗಮಿಸಿದ ಬೈಂದೂರು ವಿಧಾನಸಭಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಏಜೆಂಟ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿ ಮತ ಏಣಿಕೆ
ಕೇಂದ್ರದಲ್ಲಿ ನಡೆದಿದೆ.
ಬಲಗಾಲಿನಲ್ಲಿ ಮೊಬೈಲ್ ನ್ನು ಕಟ್ಟಿಕೊಂಡು ಕೇಸರಿ ಶಾಲನ್ನು ಧರಿಸಿಕೊಂಡು ಪೊಲೀಸರ ಕಣ್ಣು ತಪ್ಪಿಸಿ
ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾದ ಬಿಜೆಪಿ ಏಜೆಂಟ್ ಸದಾಶಿವ
ಕಂಚಿಗೋಡು ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಂದ್ರ ಹಾಕೆ ದ್ವಾರದಲ್ಲೇ
ತಡೆಹಿಡಿದು ವಾಪಾಸು ಕಳುಹಿಸಿದರು.

