ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಪೊಲೀಸ್ ವಶಕ್ಕೆ.

ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಪೊಲೀಸ್ ವಶಕ್ಕೆ.


ಮಂಗಳೂರು ಮೇ 12 : ಮಂಗಳೂರಿನ ಪ್ರಸಿದ್ದ ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೈಕ್ ನಲ್ಲಿ ಬಂದ ಮೂವರು ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್ ಹಾಗೂ ಫಾರೂಕ್‍ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಯುವಕರು ತಮ್ಮನ್ನು ಮುಸ್ಲಿಮರೆಂದೂ ಅಸೈಗೋಳಿಯವರು ಎಂದೂ ಹೇಳಿಕೊಂಡಿದ್ದಾರೆ. ‘ಕಾಟಿಪಳ್ಳಕ್ಕೆ ಹೊರಟ ತಾವು ಜಿಪಿಎಸ್ ಹಾಕಿಕೊಂಡು ಬೈಕಿನಲ್ಲಿ ಹೋಗುತ್ತಿದ್ದೆವು. ದಾರಿ ತಪ್ಪಿ ಇಲ್ಲಿಗೆ ಬಂದೆವು’ ಎಂದೂ ಹೇಳಿಕೊಂಡಿದ್ದಾರೆ. ‘ದೇವಸ್ಥಾನ ಅಂಗಣದಲ್ಲಿ ಯುವಕರು ಸಂಶಯಾಸ್ಪದವಾಗಿ ತಿರುಗುತ್ತಿದ್ದರು. ಈ ಯುವಕರು ದೇವಸ್ಥಾನದ ಪ್ರಾಂಗಣಕ್ಕೆ ಬೈಕ್ ತಂದಿದ್ದಾರೆ. ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದರು’ ಎಂದು ಬಜರಂಗದಳವರು ಆರೋಪಿಸಿದ್ದಾರೆ.

ರಾಜ್ಯ