43,364 ಮಂದಿ ಸುಳ್ಯ ಕ್ಷೇತ್ರದಲ್ಲಿ ಮತದಾನ ಮಾಡಿಲ್ಲ..!


ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಮತದಾನ ಮುಕ್ತಾಯ ವಾಗಿದ್ದು ಶೇ ..ಮತದಾನ ದಾಖಲಾಗಿದೆ , ಒಟ್ಟು ಕ್ಷೇತ್ರದಲ್ಲಿ 2 ಲಕ್ಷದ 6 ಸಾವಿರ ಮತದಾರರಲ್ಲಿ 1,62,636 ಮಂದಿ ಒಟ್ಟು ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ
81,401 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 81,235 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ ತಾಲೂಕು ಚುನಾವಣೆ ಆಯೋಗ ಪ್ರತೀ ಎರಡು ಗಂಟೆಗೊಮ್ಮೆ ತಾಲೂಕಿನ ಒಟ್ಟು ಮತದಾನದ ವಿವರ ನೀಡುತ್ತಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಲ್ಲಿ ಮತದಾನ ವಾಗಿತ್ತು ಅದರಲ್ಲಿ ಸುಳ್ಯ ತಾಲೂಕಿನಲ್ಲಿ 119 ಮತ್ತು ಕಡಬ ತಾಲೂಕಿನಲ್ಲಿ 112 ಮತಗಟ್ಟೆಗಳಿದ್ದವು.101856 ಪುರುಷ , 104173 ಮಹಿಳಾ ಮತದಾರರನ್ನು ಹೊಂದಿದ್ದ ಕ್ಷೇತ್ರದಲ್ಲಿ ಒಟ್ಟು8 ಮಂದಿ ಸ್ಪರ್ಧಾ ಕಣದಲ್ಲಿದ್ದರು, ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ, ಕಾಂಗ್ರೇಸ್ ಅಭ್ಯರ್ಥಿಯಾಗಿ ಜಿ ಕೃಷ್ಣಪ್ಪ, ಆಮ್ ಆದ್ಮಿ ಪಾರ್ಟಿಯಿಂದ ಸುಮುನಾ ಬೆಳ್ಳಾರ್ಕರ್, ಜೆ ಡಿ ಎಸ್ ಪಕ್ಷದಿಂದ ಹೆಚ್ ಎಲ್ ವೆಂಕಟೇಶ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ, ಕೆ ಆರ್ ಎಸ್ ಪಕ್ಷದಿಂದ ಗಣೇಶ್, ಪ್ರಜಾಕಿಯದಿಂದ ರಮೇಶ್ ಬೂಡು, ಪಕ್ಷೇತರ ಅಭ್ಯರ್ಥಿ ಗುರುವಪ್ಪ ಸ್ಪರ್ಧಾ ಕಣದಲ್ಲಿದ್ದಾರೆ, ಒಟ್ಟಿನಲ್ಲಿ ಮತದಾರರು ಒಲವು ಯಾರ ಮೇಲಿತ್ತು ಎಂಬುದನ್ನು ಮೇ 13 ವರೆಗೆ ಕಾದು ನೂಡಬೇಕಾಗಿದೆ.

