
ಸುಳ್ಯ ಕ್ಷೇತ್ರದವರೇ ಆದ 3 ಮಂದಿ ಸಂಸದರು,
ಕೇಂದ್ರ ಕೃಷಿ ಸಚಿವರು ಇದ್ದರೂ ಅಡಿಕೆ ದರದಲ್ಲಿ
ಉಂಟಾಗುತ್ತಿರುವ ಅಸ್ತಿರತೆಯನ್ನು ಸರಿಪಡಿಸಲು, ಸುಳ್ಯ ಕ್ಷೇತ್ರದ ಅಡಿಕೆ ಕೃಷಿಕರ ಹಿತ ಕಾಯಲು ಈಗಿರುವ ಸರಕಾರ ಪ್ರಯತ್ನಿಸುತ್ತಿಲ್ಲ ಇದನ್ನು ಕೃಷಿಕರು ಅರಿಯ ಬೇಕಾಗಿದೆ.ಕೃಷಿಕರ ಅಭ್ಯುದಯಕ್ಕಾಗಿ ತೆರೆದುಕೊಂಡ ಕ್ಯಾಂಪ್ಕೂ ಇಂದು ಕೃಷಿಕರನ್ನು ಬಳಸಿಕೊಂಡು ಉಧ್ಯಮ ನಡೆಸುತ್ತಿದೆ, ಮಾರುಕಟ್ಟೆಗಿಂತ ಕಿಲೊ ಒಂದರಲ್ಲಿ 10 ರೂ ಗಿಂತ ಕಡಿಮೆದರದಲ್ಲಿ ಅಡಿಕೆ ಖರೀದಿಸುತ್ತಿದ್ದು ಈ ದಾರಣೆಯ ಹತೋಟಿ ಕರಾವಳಿಯ ಜನಪ್ರತಿನಿಧಿಗಳಲ್ಲಿ ಇದ್ದರೂ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಅಡಿಕೆಗೆ ಕೆಜಿಗೆ 500 ರೂ ಎಂದು ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದರೂ ಸಾಮಾನ್ಯ ಕೃಷಿಕರಿಗೆ ಆ ಬೆಲೆ ಸಿಗುತ್ತಿಲ್ಲಾ. ಹೊಸ ಅಡಿಕೆ ಮತ್ತು ಸಿಂಗಲ್ ಚೋಲ್ ಹಾಗು ಡಬಲ್ ಚೋಲ್ ಅಡಿಕೆ ದರದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಈ ರೀತಿಯ ಅಸ್ಥಿರತೆಗೆ ಸರಕಾರಗಳ ನೀತಿಯೇ ಕಾರಣ. ಈ ರೀತಿಯ ಅಸ್ತಿರತೆಗೆ ಕೃಷಿಕರು ಚುನಾವಣೆಯ ಮೂಲಕ ಉತ್ತರ ನೀಡಬೇಕು ಎಂದುಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಕರೆ ನೀಡಿದ್ದಾರೆ.



ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಅಡಿಕೆಗೆ ಈಗ ಕೆಜಿಗೆ ರೂ.400 ಇದೆ, ಸಿಂಗಲ್ ಚೋಲ್‌ಗೆ ಕೆಜಿಗೆ 480, ಡಬಲ್ ಚೋಲ್‌ಗೆ 525 ಇದೆ. ಹೊಸ ಅಡಿಕೆಗೂ ಸಿಂಗಲ್ ಚೋಲ್‌ಗೆ 80 ರೂ, ಡಬಲ್ ಚೋಲ್‌ಗೆ 125 ರೂ ವ್ಯತ್ಯಾಸ ಇದೆ.2020ರವರೆಗೆ ಹೊಸ ಅಡಿಕೆ ಹಾಗು ಸಿಂಗಲ್ ಚೋಲ್‌ಗೆ 10 ರೂ, ಹೊಸ ಅಡಿಕೆಗೂ 20 ರೂ ಅಷ್ಟೇ ವ್ಯತ್ಯಾಸ ಇತ್ತು. ಆದರೆ ಈಗ 80 ಮತ್ತು 125 ರೂಗಳ ಇಷ್ಟು ದೊಡ್ಡ ಅಂತರ ಯಾಕೆ ಎಂದು ಅವರು ಪ್ರಶ್ನಿಸಿದರು.ಸಾಮಾನ್ಯವಾಗಿ ಹೊಸ ಅಡಿಕೆ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಬರುತ್ತದೆ. ಆ ಸಂದರ್ಭದಲ್ಲಿ 340ರೂ ಮಾತ್ರ ದರ ಇತ್ತು. ಈಗ
400 ರೂ ಇದೆ. ಸಾಮಾನ್ಯ ಕೃಷಿಕರು ಡಿಸೆಂಬರ್ ನಿಂದ
ಮಾರ್ಚ್ ಏಪ್ರಿಲ್ ತಿಂಗಳ ಒಳಗೆ ಮಾರಾಟ ಮಾಡುತ್ತಾರೆ.ಅಡಿಕೆ ಹಳೆಯದಾಗಿ ಸಿಂಗಲ್ ಚೋಲ್ ಆಗಲು ಒಂದು ವರ್ಷ ಕಾಯಬೇಕು, ಡಬಲ್ ಚೋಲ್ ಆಗಲು ಎರಡು ವರ್ಷದಾಸ್ತಾನಿರಿಸಬೇಕು. ಆದರೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಇಷ್ಟು ಸಮಯ ದಾಸ್ತಾನು ಇರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಎಷ್ಟೇ ದರ ಇದ್ದರೂ ಅದರ ಪ್ರಯೋಜನ ಸಾಮಾನ್ಯ ಕೃಷಿಕನಿಗೆ ದೊರೆಯುತ್ತಿಲ್ಲ. ಇದರ ಲಾಭವನ್ನು ವ್ಯಾಪಾರಸ್ತರು, ಅಡಿಕೆ
ಖರೀದಿ ಮಾಡುವ ಸಂಸ್ಥೆಗಳು ಪಡೆಯುತ್ತಿವೆ. ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ಮಧ್ಯೆಯ ದರದ ವ್ಯತ್ಯಾಸವನ್ನು ಕಡಿಮೆ ಮಾಡಬೇಕು. ಈ ಅಂತರವನ್ನು ತಪ್ಪಿಸಿ ಅಡಿಕೆಗೆ ನ್ಯಾಯಯುತ ಬೆಲೆ ದೊರಕಲು ಸರಕಾರ ನೀತಿ ರೂಪಿಸಬೇಕು.ಕೃಷಿಕರ ಸಂಸ್ಥೆಯಾದ ಕ್ಯಾಂಪೋ ಕ್ರಮ ಕೈಗೊಳ್ಳಬೇಕು ಎಂದುಅವರು ಒತ್ತಾಯಿಸಿದರು. ವಿದೇಶದಿಂದ ಅಡಿಕೆ ಕಳ್ಳ ಸಾಗಣಿಕೆ ಆಗುವುದನ್ನು ತಡೆಯಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. . ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯ ಅಸ್ತಿರತೆ ಮತ್ತು ದರ ವ್ಯತ್ಯಾಸವನ್ನು ಹೋಗಲಾಡಿಸಲುಕೃಷಿಕರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಪ್ರಮುಖರಾದ ಸರಸ್ವತಿ ಕಾಮತ್, ಸುರೇಶ್ ಎಂ.ಎಚ್, ಚಂದ್ರಲಿಂಗಂ, ಅನಿಲ್ ರೈ,ಶರೀಫ್ ಕಂಠಿ, ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.
