ಬರಿದಾಯ್ತು ಪಯಸ್ವಿನಿ ಒಡಲು: ವಾರ ಕಳೆದರೆ ಸುಳ್ಯ ನಗರ ವಾಸಿಗಳಿಗೆ ಕುಡಿಯಲು ನೀರಿಲ್ಲ …!

ಬರಿದಾಯ್ತು ಪಯಸ್ವಿನಿ ಒಡಲು: ವಾರ ಕಳೆದರೆ ಸುಳ್ಯ ನಗರ ವಾಸಿಗಳಿಗೆ ಕುಡಿಯಲು ನೀರಿಲ್ಲ …!

ವಾರ ಕಳೆದರೆ ಸುಳ್ಯ ನಗರ ವಾಸಿಗಳಿಗೆ ಕುಡಿಯಲು ನೀರಿಗೆ ಅಭಾವ ಉಂಟಾಗಲಿದೆ ಎಂದು ತಿಳಿದುಬಂದಿದೆ, ಈ ಬಗ್ಗೆ ಸ್ವತಹ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬಿಸಿಲಿನ ಬೇಗೆಯಲ್ಲಿ ಬಸವಳಿದಿರುವ ಸುಳ್ಯ ನಗರ ನಿವಾಸಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮಳೆಗಾಲ ಮೈ ತುಂಬಿ ಹರಿಯುವ ಪಯಸ್ವಿನಿ ಇದೀಗ ಎಪ್ರಿಲ್ ತಿಂಗಳ ಬಿಸಿಲಿಗೆ ಬತ್ತಿಹೋಗಿ ತನ್ನ ಸಂಪೂರ್ಣ ಹರಿವನ್ನೇ ನಿಲ್ಲಿಸಿದೆ,ಸಂಪಾಜೆ, ಪೆರಾಜೆ ಯಲ್ಲಿ ಸಣ್ಣ ತೊರೆಯಂತೆ ಹರಿದು ಬರುವ ಪಯಸ್ವಿನಿ ಹೇಗೋ ಸುಳ್ಯ ಬರುವ ಹೊತ್ತಿಗೆ ನೀರು ಸಂಪೂರ್ಣ ಹರಿವು ನಿಲ್ಲಿಸಿ ಬರಡು ಬರಡಾಗುತ್ತದೆ.. ಸಾಮಾನ್ಯವಾಗಿ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಒಂದೆರಡು ಬಾರಿ ಸುರಿಯುತ್ತಿದ್ದ ಮಳೆ , ಈ ಬಾರಿ ಸುರಿಯಲೇ ಇಲ್ಲ ,ದಿನೇ ದಿನೇ ಏರುತ್ತಿರುವ ತಾಪಮಾನದ ನಡುವೆ ಪಯಸ್ವಿನಿ ನದಿಯನ್ನೇ ಆಶ್ರಯಿಸಿರುವ ಸುಳ್ಯ ನಗರ ವಾಸಿಗಳಿಗೆ ಇದೀಗ ಕುಡಿಯುವ ನೀರಿಗೂ ಅಭಾವ ಉಂಟಾಗಿದೆ.ವಾರ ಕಳೆದರೆ ನೀರಿಗೇನು ಮಾಡಬೇಕು ಎನ್ನುವ ಆತಂಕ ಮನೆಮಾಡಿದೆ, ಸುಳ್ಯ ನಗರದಲ್ಲಿ 90% ಶೇ ಮಂದಿ ನಗರ ಪಂಚಾಯತ್ ನೀರನ್ನೆ ಆಶ್ರಯಿಸಿದ್ದಾರೆ, ಪ್ರತಿ ದಿನ 2500 ಮನೆಗಳಿಗೆ ನಗರ ಪಂಚಾಯತ್ ನೀರು ಹರಿಸುತ್ತಿದ್ದು ಕಳೆದ ಕೆಲವು ದಿನಗಳಿಂದ ನಗರ ವಾಸಿಗಳಿಗೆ ದಿನ ಬಿಟ್ಟು ದಿನ ನೀರು ನೀಡುತ್ತಾ .. ಜನರಿಗೆ ನೀರಿನ ಅಭಾವ ತೀರಾ ಕಾಡದಂತೆ ಜವಬ್ದಾರಿ ಮೆರೆದಿತ್ತು. ಇದೀಗ ಪಯಸ್ವಿನಿ ತೀರಾ ಬರಿದಾಗಿದ್ದು ಒಂದು ವಾರ ಕಳೆದರೆ ನಗರವಾಸಿಗಳಿಗೆ ಬೇಕಾದ ದಿನಬಳಕೆಯ ನೀರಿಗೆ ಬೇರೆ ಕಡೆಗಳಿಂದ ಟ್ಯಾಂಕರ್ ಬಳಸಿ ನೀರು ಹರಿಸಬೇಕಾದಿತೆಂಬ ಆತಂಕ ಎದುರಾಗಿದೆ. ಅಲ್ಲದೆ ನದಿಯಲ್ಲಿನ ಜಲಚರಗಳು ಸಂಪೂರ್ಣ ನಶಿಸಿ ಹೋಗುವ ಭೀತಿ ತಲೆದೋರಿದೆ.

ನದಿತಟದ ತೋಟಗಳಿಗೆ ನಿರಂತರ ನೀರು ಹರಿಸುವ ಕೃಷಿ ಪಂಪ್ ಗಳ ವಿದ್ಯುತ್ ಕಡಿತಕ್ಕೆ ಚಿಂತನೆ.

ಪಯಸ್ವಿನಿ ನದಿ ಸಂಪಾಜೆ ಪೆರಾಜೆ ಬಾಗದಲ್ಲಿ ಹರಿದು ಬರುತ್ತಿದ್ದರು ಸುಳ್ಯ ಸೇರುತ್ತಲೇ ಬರಿದಾಗಲು ಹೊಳೆ ಬದಿಯ ಕೃಷಿಕರು ತಮ್ಮ ತೋಟಗಳಿಗೆ ನಿರಂತರ ನೀರು ಹರಿಸುವುದೇ ಕಾರಣ ಎಂದು ಆರೋಪಗಳು ಕೇಳಿಬಂದಿವೆ , ಹಾಗಾಗಿ ಪಯಸ್ವಿನಿ ತಟದಲ್ಲಿ ತೋಟವಿರುವ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಕಡಿತಗೊಳಿಸಿ , ನದೀ ನೀರನ್ನೇ ಅಶ್ರಯಿಸಿ ಬದುಕು ಸಾಗಿಸುತ್ತಿರುವ ನಗರವಾಸಿಗಳಿಗೆ ನೀರು ಹರಿಸುವ ಹೊಣೆಯನ್ನು ನಗರಪಂಚಾಯತ್ ಹೊರಬೇಕಾಗಿದೆ.ಈ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಹಿಂದೆಯೂ ಆಗಿತ್ತು ಕುಡಿಯವ ನೀರಿಗೆ ತಾತ್ವಾರ..

ಕಳೆದ ಆರೇಳು ವರುಷಗಳ ಹಿಂದೆ ಇದೇ ಸ್ಥಿತಿ ಎದುರಾಗಿತ್ತು.ಆ ಸಂದರ್ಭದಲ್ಲಿ ಪಯಸ್ವಿನಿ ನದಿ ತಟದ ಕೃಷಿಕರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಗೊಳಿಸಲಾಗಿತ್ತು,ಶುದ್ದ ಕುಡಿಯು ನೀರನ್ನು ಪ್ಯಾಕ್ಟ್ರಿಯೊಂದರಿಂದ ಕನಿಷ್ಟ ದರದಲ್ಲಿ ಖರೀದಿಸಿ ನಗರವಾಸಿಗಳಿಗೆ ಕಡಿಮೆ ದರದಲ್ಲಿ ವಿತರಿಸಿ ನೀರಿನ ಅಭಾವಕ್ಕೆ ತಾತ್ಕಾಲಿಕ ಪರಿಹಾರ ಒದಗಿಸಿತ್ತು,

ಮಿತವಾಗಿ ನೀರು ಬಳಸಿ
ನಗರವಾಸಿಗಳು ಸಹ ನೀರು ಪೋಲಾಗದಂತೆ ಮಿತವಾಗಿ ಬಳಸಿ, ನೀರು ಉಳಿಸುವ ಕೆಲಸ ಮಾಡಬೇಕಾಗಿದೆ ಈ ಮೂಲಕ ಅನಾವಶ್ಯಕವಾಗಿ ಪೋಲಾಗುವ ನೀರನ್ನು ತಡೆಗಟ್ಟಿ , ಮತ್ತಷ್ಟು ಮನೆಗಳಿಗೆ ನೀರು ತಲುಪಲು ಸಹಕಾರ ನೀಡಬೇಕಾಗಿದೆ.

ರಾಜ್ಯ