ಸುಳ್ಯ ಕಾಂಗ್ರೇಸ್ ಒಳಗೆ ತಳಮಳ : ಅಭಿಪ್ರಾಯ ಕ್ರೂಡಿಕರಿಸಿದ ಜಿಲ್ಲಾ ನಾಯಕರು:ಸ್ಥಳೀಯ ನಾಯಕರಿಗೆ ದಿಕ್ಕಾರ ಕೂಗಿದ ಕಾರ್ಯಕರ್ತರು.ಈ ಬಾರಿ ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಬೆಳವಣಿಗೆ.

ಸುಳ್ಯ ಕಾಂಗ್ರೇಸ್ ಒಳಗೆ ತಳಮಳ : ಅಭಿಪ್ರಾಯ ಕ್ರೂಡಿಕರಿಸಿದ ಜಿಲ್ಲಾ ನಾಯಕರು:
ಸ್ಥಳೀಯ ನಾಯಕರಿಗೆ ದಿಕ್ಕಾರ ಕೂಗಿದ ಕಾರ್ಯಕರ್ತರು.
ಈ ಬಾರಿ ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಬೆಳವಣಿಗೆ.

ಸುಳ್ಯ, ಎ.15: ಸುಳ್ಯದಲ್ಲಿ ಕಾಂಗ್ರೆಸ್ ಘೋಷಿತ ಅಭ್ಯರ್ಥಿ
ಜಿಗಣಿ ಕೃಷ್ಣಪ್ಪ ವಿರುದ್ಧ ಕಾರ್ಯಕರ್ತರು ಬಂಡಾಯ
ಎದ್ದಿರುವ ಬಗ್ಗೆ ಸುಳ್ಯದ ಚುನಾವಣಾ ಕಚೇರಿಯಲ್ಲೇ
ಅಭಿಪ್ರಾಯ ಸಂಗ್ರಹ ನಡೆಯಿತು. ಮಾಜಿ ಸಚಿವ
ರಮಾನಾಥ ರೈ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ
ಮಂಜುನಾಥ ಭಂಡಾರಿ ಕಾರ್ಯಕರ್ತರ ಅಭಿಪ್ರಾಯ
ಸಂಗ್ರಹಿಸಿದರು. ಸಭೆಯಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು. ಸೇರಿದ ಕಾರ್ಯಕರ್ತರ ಪೈಕಿ 90 ಶೇಕಡಾ ಮಂದಿ ನಂದಕುಮಾರ್ ಅವರೇ ತಮ್ಮ ಅಭ್ಯರ್ಥಿಯಾಗಬೇಕೆಂದು ಅಹವಾಲು ಮಂಡಿಸಿದ್ದಾರೆ.


ಈ ನಡುವೆ, ಕಾಂಗ್ರೆಸ್ ಮುಖಂಡ ಧನಂಜಯ
ಅಡ್ಪಂಗಾಯ ಅವರು ಕಾರ್ಯಕರ್ತರ ಅಭಿಪ್ರಾಯ
ಕೇಳಬೇಕಿಲ್ಲ. ಮುಖಂಡರ ಅಭಿಪ್ರಾಯ ಮಾತ್ರ ಸಾಕು
ಎಂದು ಹೇಳಿದ್ದು ಕಾರ್ಯಕರ್ತರ ಆಕ್ರೋಶಕ್ಕೆ
ಕಾರಣವಾಯಿತು. ಕೆಲಹೊತ್ತು ಅಡ್ಪಂಗಾಯ ಮತ್ತು
ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ರಮಾನಾಥ ರೈ ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯತ್ ಸದಸ್ಯರು, ತಾ.ಪಂ ಸದಸ್ಯರು ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ ಅದರಂತೆ ಪಕ್ಷದ ಮುಖಂಡರಿಗೆ ವರದಿ ಮಾಡುವುದಾಗಿ ಹೇಳಿದರು ಇದರಿಂದ ಕೆರಳಿದ ಕಾರ್ಯಕರ್ತರು ನಾವಿದ್ದರೆ ನೀವು ನಮ್ಮ ಅಭಿಪ್ರಾಯಕ್ಕೂ ಬೆಲೆ ಕೊಡಬೇಕು ನಮ್ಮ ಅಭಿಪ್ರಾಯಕ್ಕೆ ಬೆಲೆ ನೀಡದಿದ್ದರೆ ಚಿತ್ರಣ ಬದಲಾಗಬಹುದು ಎಂದು ಜೋರು ದ್ವನಿಯಲ್ಲಿ ಕೂಗತೊಡಗಿದರು ಈ ಸಂದರ್ಭದಲ್ಲಿ ಮಾತನಾಡಿದ ರಮಾನಾಥ ರೈ ನಾವೆಲ್ಲ ಕಾಂಗ್ರೆಸಿಗರು.


ಪಕ್ಷದ ಕಾರ್ಯಕರ್ತರು, ಮುಖಂಡರು ಎನ್ನುವ ಭೇದ
ಇಲ್ಲ. ಎಲ್ಲರ ಅಭಿಪ್ರಾಯಕ್ಕೂ ಸಮಾನ ಆದ್ಯತೆ ಇದೆ.
ನನಗೆ ವಸ್ತುಸ್ಥಿತಿಯ ವರದಿ ಕೊಡಲು ಹೇಳಿದ್ದಾರೆ.
ಯಥಾವತ್ ವರದಿಯನ್ನು ಕೊಡುತ್ತೇನೆ ಎಂದು
ಹೇಳಿದರು. ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ ಮತ್ತಿತರರು ಸೇರಿ ಕೆಲವು ನಾಯಕರಷ್ಟೇ ಕೃಷ್ಣಪ್ಪ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭರತ್ ಮುಂಡೋಡಿಇದು ಸರಿಯಾದ ಸಭೆ ಅಲ್ಲ ಇಲ್ಲಿ ನಂದಕುಮಾರ್ ಕಡೆಯ ಜನರನ್ನು ಸೇರಿಸಿದ್ದಾರೆ, ಇಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ನಡೆಸಬೇಕಾಗಿತ್ತು ಎಂದು ಆಕ್ರೋಶಿತರಾಗಿ ರಮಾನಾಥ್ ರೈ ಎದುರು ಹೇಳತೊಡಗಿದರು ಇದರಿಂದ ಅಸಮದಾನಕ್ಕೆ ಒಳಗಾದ ಕಾರ್ಯಕರ್ತರು ಹಾಗಾದರೆ ನಾವು ಕಾಂಗ್ರೇಸಿಗರಲ್ವಾ ಎಂದು ಜೋರಾಗಿ ಒಕ್ಕೋರಲಿನಿಂದ ಕೂಗ ತೊಡಗಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಧನಂಜಯ ಅಡ್ಪಂಗಾಯರು ನಂದಕುಮಾರ್ ಗುಣ ನಡತೆ ಸರಿಯಿಲ್ಲ, ಅವರು ಕಾಂಗ್ರೇಸ್ ವಿರುದ್ದ ಬಂಡಾಯ ಸ್ಪರ್ದೆ ಮಾಡುವವರು, ಇಂದು ಈ ಸಭೆ ಇಲ್ಲದಿದ್ದರೆ ಇಷ್ಟು ಹೊತ್ತಿಗಾಗಲೆ ನಾಮ ಪತ್ರ ಸಲ್ಲಿಸುವವರಿದ್ದರು, ಅವರು ಮತ್ತು ಅವರ ಜನರು ಗಾಂಗ್ರೇಸಿಗರಲ್ಲ ಎಂದು ಹೇಳಿದರು ಇದು ನಂದಕುಮಾರ್ ಅಭಿಮಾನಿಗಳನ್ನು ಕೆರಳಿಸಿತು ಧನಂಜಯ ಅಡ್ಪಂಗಾಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸತೊಡಗಿದರು ನಂದಕುಮಾರ್ ಗುಣ ನಡತೆಯ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕುಎಂದು ಕೂಗತೊಡಗಿದರು ಈ ಸಂದರ್ಭದಲ್ಲಿ ಕ್ಷಮೆ ಕೇಳುವ ಪ್ರಶ್ನೇಯೇ ಇಲ್ಲ ಎಂದು ಧನಂಜಯ ಅಡ್ಪಂಗಾಯ ಹೇಳಿದರು , ಕಾರ್ಯಕರ್ತರ ಆಕ್ರೋಶ ಅರಿತ ರಮಾನಾಥ ರೈ ಎಲ್ಲರ ಅಭಿಪ್ರಾಯ ಸಿಕ್ಕಿದೆ ಅಭಿಪ್ರಾಯವನ್ನು ಪಕ್ಷ ನಾಯಕರಿಗೆ ತಿಳಿಸುವುದಾಗಿ ಹೇಳಿ ಅಲ್ಲಿಂದ ತೆರಳಿದರು.

ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಭರತ್ ಮುಂಡೋಡಿ ಮತ್ತು ಧನಂಜಯ ಅಡ್ಪಂಗಾಯ ವಿರುದ್ದ ದಿಕ್ಕಾರ ಕೂಗ ತೊಡಗಿದರು. ಸಭೆಗೆ ಸಾಮಾನ್ಯ ಕಾರ್ಯಕರ್ತರಿಂದ ತೊಡಗಿ ಕಡಬ ಮತ್ತು ಸುಳ್ಯ ಬ್ಲಾಕ್ ಮಟ್ಟದ ನಾಯಕರೆಲ್ಲ ನಂದಕುಮಾರ್ ಪರವಾಗಿ ಅಭಿಪ್ರಾಯ ಹೇಳಿದರು. ಸಭೆಯಲ್ಲಿ ನಂದಕುಮಾರ್ ಕೂಡ ಉಪಸ್ಥಿತರಿದ್ದರು. ಜಿಗಣಿ ಕೃಷ್ಣಪ್ಪ ಸುಳ್ಯ ಕ್ಷೇತ್ರದಲ್ಲಿ ಇದ್ದರೂ, ಸಭೆಗೆ ಬಂದಿರಲಿಲ್ಲ. ಈ ಮದ್ಯೆ ಎಐಸಿಸಿ ಕಾರ್ಯಕರ್ತರು ಸುಳ್ಯದಲ್ಲಿ ಮತ್ತೊಂದು ಸುತ್ತಿನ ಸರ್ವೆ ನಡೆಸಿದ್ದಾರೆ .ಇದರಲ್ಲೂ ನಂದಕುಮಾರ್ ಹೆಸರು ಅಧಿಕವಾಗಿ ಕೇಳಿ ಬಂದಿದೆ ಎಂದು ತಿಳಿದು ಬಂದಿದೆ.

ಅಭ್ಯರ್ಥಿತನಕ್ಕೆ ಸ್ಥಳೀಯ ಆಕಾಂಕ್ಷಿಯಿಂದ ಮನವಿ.

ಈ ಎಲ್ಲದರ ಮದ್ಯೆ ಅಭಿಪ್ರಾಯ ಮಂಡಿಸಲು ಹೋದ ನಂದರಾಜ್ ಸಂಕೇಶ ಪಕ್ಷದಲ್ಲಿರುವ ಈಗಿರುವ ಗೊಂದಲ ನಿವಾರಣೆಗೆ ಸ್ಥಳೀಯನಾಗಿರುವ ನನ್ನನ್ನು ಅಭ್ಯರ್ಥಿತನಕ್ಕೆ ಪರಿಗಣಿಸಿ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾದಲ್ಲಿ ಕೃಷ್ಣಪ್ಪ ಕಡೆಯಿಂದಲೂ ಜನ ಸೇರಿಸುತ್ತೇವೆ .

ಈ ರೀತಿ ಪಕ್ಷದೊಳಗೆ ಬೆಳವಣಿಗೆಯಾದಲ್ಲಿ ಕೃಷ್ಣಪ್ಪ ಅಭಿಮಾನಿಗಳನ್ನು ಸೇರಿಸುತ್ತೇವೆ ರಮಾನಾಥ್ ರೈ ಮತ್ತೋಮ್ಮೆ ಸರ್ವೆ ಮಾಡಲಿ ಎಂದು ಸಿದ್ದಿಕ್ ಕೊಕೋ ಅಭಿಪ್ರಾಯಾ ಹೇಳಿಕೊಂಡಿದ್ದಾರೆ.

ರಾಜ್ಯ