ಪುತ್ತೂರು : ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ : ಅಶೋಕ್ ಕುಮಾರ್ ರೈ ಅಭ್ಯರ್ಥಿಯೆಂದು ಅಧಿಕೃತ ಘೋಷಣೆಯೊಂದೇ ಬಾಕಿ…

ಪುತ್ತೂರು : ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ : ಅಶೋಕ್ ಕುಮಾರ್ ರೈ ಅಭ್ಯರ್ಥಿಯೆಂದು ಅಧಿಕೃತ ಘೋಷಣೆಯೊಂದೇ ಬಾಕಿ…

ಪುತ್ತೂರಿನಲ್ಲಿ ಅಶೋಕ್ ಕುಮಾರ್ ಗೆಲುವಿಗೆ ಒಂದೇ ಮೆಟ್ಟಿಲು ಬಾಕಿ..!

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ
ಪುತ್ತೂರಿನಿಂದ ಕಾಂಗ್ರೆಸ್‌ನ 13 ಕ್ಕೂ ಹೆಚ್ಚು ಮಂದಿ
ಟಿಕೆಟ್ ಆಕಾಂಕ್ಷಿಗಳು ಭಾರೀ ಪೈಪೋಟಿ ನಡೆಸಿದ್ದು,
ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಮತ್ತು
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ಹೆಸರು
ಮುಂಚೂಣಿಯಲ್ಲಿತ್ತು. ಇದೀಗ ತೀವ್ರ ಕುತೂಹಲ
ಹೆಚ್ಚಿಸಿದ ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್
ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರು
ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ
ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಅಶೋಕ್ ಕುಮಾರ್ ರೈ ಅಂತಿಮ ಹಂತದಲ್ಲಿ ಟಿಕೆಟ್ ಕೈ ತಪ್ಪಿತ್ತು ಈ ಬಾರಿ ಅವರು ಬಿಜೆಪಿ ತೊರೆದು ಕಾಂಗ್ರೇಸ್ ಕೈ ಹಿಡಿದಿದ್ದರು. ಅನೇಕ ಬಡವರ ಪಾಲಿನ ಆಶಾಕಿರಣವಾದ ಅಶೋಕ್ ರೈ ಕುಮಾರ್ ಕೊಡುಗೈ ದಾನಿಯು , ಅನೇಕ ದೇವಸ್ಥಾನಗಳ ಜೀರ್ಣೋದ್ದಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇದೀಗ ಪುತ್ತೂರಿನಲ್ಲಿ ಕಾಂಗ್ರೇಸ್ ಅವರಿಗೆ ಅವಕಾಶ ನೀಡಿದ್ದು ಸಿಕ್ಕ ಅವಕಾಶ ಬಳಸಿಕೊಳ್ಳುತಾರಾ ಕಾದು ನೊಡಬೇಕಾಗಿದೆ.

ರಾಜ್ಯ