
ತೊಡಿಕಾನದಿಂದ ಸುಳ್ಯ ಕಡೆಗೆ ಪ್ರಯಾಣಿಕರನ್ನು ಹೇರಿಕೊಂಡು ಬರುತ್ತಿದ್ದ ಅಟೋ ರಿಕ್ಷಾದ ಹಿಂಬದಿಗೆ ಅರಂಬೂರಿನಲ್ಲಿ ಮಡಿಕೇರಿ ಕಡೆಯಿಂದ ಗೋಕರ್ಣ ತೆರಳುವ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅರಂತೋಡು ಅಡ್ಕಬಳೆ ಸಮೀಪದ ಮಹಿಳೆಗೆ ಗಂಬೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಎ.11 ರಂದು ನಡೆದಿದೆ.ಬಸ್ ಡಿಕ್ಕಿ ಹೊಡೆದ ವೇಗಕ್ಕೆ ರಿಕ್ಷಾ ತನ್ನ ನಿಯಂತ್ರಣ ಕಳೆದು ರಸ್ತೆ ಬದಿಯ ಮೈಲುಗಲ್ಲಿಗೆ ಗುದ್ದಿ ನಿಂತಿದೆ. ರಿಕ್ಷಾ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ರಿಕ್ಷಾ ಚಾಲಕ, ಮತ್ತು ಮಹಿಳೆಯ ಗಾಯಾಳು ಪತಿ ಮತ್ತು ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ಮಹಿಳೆಯನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.



ಅಪಘಾತದಲ್ಲಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪತ್ನಿ ಈಗ ತಾನು ಗಾಯಾಳಾಗಿ ಆಸ್ಪತ್ರೆ ದಾಖಲು .

ಗಾಯಗೊಂಡ ಮಹಿಳೆಯ ಪತಿ ಇತ್ತೀಚೆಗಷ್ಟೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹ ಹಿಂತುರುಗಿದ್ದರು, ಅವರನ್ನು ಮತ್ತೆ ಆಸ್ಪತ್ರೆಗೆ ರಿಕ್ಷಾದಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
