ನಾಳೆ ಪೇರಡ್ಕ-ಗೂನಡ್ಕ ಮುಹಿಯ್ಯದ್ದೀನ್ಜುಮಾ ಮಸೀದಿಯ ನವೀಕರಣ ಕಟ್ಟಡ ಉದ್ಘಾಟನೆ.

ನಾಳೆ ಪೇರಡ್ಕ-ಗೂನಡ್ಕ ಮುಹಿಯ್ಯದ್ದೀನ್
ಜುಮಾ ಮಸೀದಿಯ ನವೀಕರಣ ಕಟ್ಟಡ ಉದ್ಘಾಟನೆ.

ಇತಿಹಾಸ ಪ್ರಸಿದ್ಧ ಮುಹಿಯ್ಯದ್ದೀನ್ ಜುಮಾ ಮಸೀದಿ
ಪೇರಡ್ಕ-ಗೂನಡ್ಕ ಇದರ ನವೀಕರಣಗೊಂಡ ಮಸೀದಿಯ ವಿಸ್ತರಿತ ಕಟ್ಟಡ ಉದ್ಘಾಟನೆ ಫೆಬ್ರವರಿ 17 ರಂದು ನಡೆಯಲಿದೆ ಸರ್ವಧರ್ಮದವರು ಬೇಟಿ ನೀಡುವ ನೂರಾರು ವರ್ಷಗಳ ಇತಿಹಾಸವಿರುವ ಮುಹಿಯ್ಯದ್ದೀನ್ ಜುಮ್ಮ ಮಸೀದಿಯನ್ನು ಆಕರ್ಷಕವಾಗಿ ನವೀಕರಣ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ
60 ಲಕ್ಷದಲ್ಲಿ ನೂತನ ಅತಿಥಿ ಗೃಹ ಮತ್ತು ಶೌಚಾಲಯ
ನಿರ್ಮಿಸಲಾಗಿದೆ. ಹಾಗೂ ದಾನಿಗಳ ನೆರವಿನಿಂದ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ .ಕೆಪಿಸಿಸಿ
ಸಂಯೋಜಕರಾಗಿರುವ ಜಿ. ಕೃಷ್ಣಪ್ಪ ಸೇರಿದಂತೆ ಮುಸ್ಲಿಂ, ಹಿಂದೂ ಬಾಂಧವರು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದಾರೆ . ನವೀಕರಣ ಮಸೀದಿಯನ್ನು ಅಲ್ ಹಾಜ್ ಶೈಖುನಾ ಎಂ.ಎಂ.ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದಾರೆ
ದುವಾವನ್ನು ರಿಯಾಝ್ ಫೈಝಿ ಖತೀಬರು
ಎಂ.ಜೆ.ಎಂ.ಪೇರಡ್ಕ ನಿರ್ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ಟಿ.ಎಂ.ಶಹೀದ್ ವಹಿಸಲಿದ್ದಾರೆ ರಾಜಕೀಯ,ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ..

ರಾಜ್ಯ