ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯ.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯ.

ಮಹಾರಾಷ್ಟ್ರ ದ ನಾಗ್ಪುರ,ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಇನ್ನಿಂಗ್ಸ್ ಮತ್ತು 132 ರನ್ ಗಳ ಜಯಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 177 ರನ್ ಗೆ ಸರ್ವ ಪತನ ಕಂಡಿತು..

ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಪರ ಜಡೇಜಾ 5 ವಿಕೇಟ್ ಪಡೆದರೆ ಅಶ್ವಿನ್ 3 , ಸಿರಾಜ್ ಮತ್ತು ಸಮಿ ತಲಾ 1 ವಿಕೇಟ್ ಪಡೆದರು.

ಮೊದಲ ಇನ್ನಿಂಗ್ಸ್ ನ ಅಲ್ಪ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ನಾಯಕ ರೋಹಿತ್ ಶರ್ಮಾ ಅವರ ಶತಕ -120 ರನ್ ಮತ್ತು ಜಡೇಜ 70 ರನ್ ಮತ್ತು ಅಕ್ಷರ್ ಪಟೇಲ್ ರ 84 ರನ್ ನೆರವಿನಿಂದ 400 ರನ್ ಗಳಿಸಿ ಅಲ್ ಔಟ್ ಆಯಿತು.

ಇದರ ಮೂಲಕ 223 ರನ್ ಗಳ ಮುನ್ನಡೆ ಪಡೆಯಿತು.

ಆಸ್ಟ್ರೇಲಿಯಾ ಪರ ಟಾಡ್ ಮರ್ಫಿ 7 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ 2 , ನಾಟನ್ ಲಿಯೋನ್ 1 ವಿಕೇಟ್ ಪಡೆದರು

ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೂಡ ಭಾರತದ ಸ್ಪಿನ್ ಮೋಡಿಗೆ ಸಿಲುಕಿದ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆ ಕೇವಲ 91 ರನ್ ಗಳಿಸಿ ಅಲ್ ಔಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 132 ರನ್ನು ಸೋಲನ್ನು ಅನುಭವಿಸಿತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಕೂಡ ಅದ್ಬುತ ಬೌಲಿಂಗ್ ಮಾಡಿದ ಅಶ್ವಿನ್ 5 , ಜಡೇಜ ,ಶಮಿ ತಲಾ 2 ಮತ್ತು ಅಕ್ಷರ್ ಪಟೇಲ್ 1 ವಿಕೇಟ್ ಪಡೆದರು.

ಅರೌಂಡರ್ ಪ್ರದರ್ಶನ ನೀಡಿದ ಜಡೇಜ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮುಂದಿನ ಪಂದ್ಯ ಫೆಬ್ರವರಿ 17 ರಿಂದ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆಯಲಿದೆ.

ಕ್ರೀಡೆ