
ಗುಜರಾತಿನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ನಿರ್ಣಾಯಕ ಅಂತಿಮ T20 ಪಂದ್ಯ ದಲ್ಲಿ ಭಾರತ ತಂಡ ಜಯಗಳಿಸುವ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿದೆ.


ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಭಾರತ ತಂಡ ಶುಭಮನ್ ಗಿಲ್ ರ ಚೊಚ್ಚಲ ಶತಕದ (126 ರನ್ 63 ಬಾಲ್ 12 ಫೋರ್ 7 ಸಿಕ್ಸ್) ನೆರವಿಂದ 4 ವಿಕೇಟ್ ನಷ್ಟಕ್ಕೆ 234 ರನ್ ಗಳಿಸಿತು.
235 ರನ್ ಗುರಿ ಪಡೆದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ತನ್ನ ಪ್ರಮುಖ ವಿಕೆಟುಗಳನ್ನು ಕಳೆದುಕೊಂಡಿತು. ಅಂತಿಮವಾಗಿ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್ ಗಳಲ್ಲಿ 16ರನ್ ನೀಡಿ 4 ವಿಕೇಟ್ ಪಡೆದು ಯಶಸ್ವಿ ಬೌಲರ್ ಆಗಿ ಮಿಂಚಿದರು, ಹರ್ಷದೀಪ್ ಸಿಂಗ್ , ಶಿವಂ ಮಾವಿ , ಉಮ್ರಾನ್ ಮಲಿಕ್ ತಲಾ 2 ವಿಕೇಟ್ ಪಡೆದು ಗೆಲುವಿನ ರೂವಾರಿಗಳಾದರು.