
ಸುಳ್ಯ:ಜ.30 ರಂದು ಸಂಜೆ 4 ಗಂಟೆಯಿಂದ 30 ನಿಮಿಷಗಳ ಕಾಲ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲ ಪ್ತದೇಶವನ್ನು ಸ್ವಚ್ಛಗೊಳಿಸಬೇಕು ಆ ಮೂಲಕ ಪರಿವರ್ತನಾ ಸ್ವಚ್ಛತಾ ಆಂದೋಲನ ಕೈಜೋಡಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಕರೆ ನೀಡಿದೆ.ನಗರ ಪಂಚಾಯತ್ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಮರ ಸುಳ್ಯ ರಮಣೀಯ ಸುಳ್ಯ’ ತಂಡದ ಹೆಸರಿನಲ್ಲಿ ಕಳೆದ 20 ವಾರಗಳಿಂದ ನಿರಂತರವಾಗಿ ಪ್ರತಿ ಗುರುವಾರ ಪೂ.7 ರಿಂದ 8 ರ ತನಕ ಸ್ವಚ್ಛತಾ ಶ್ರಮದಾನ ನಡೆಯುತ್ತಿದ್ದು ಸಂಘ ಸಂಸ್ಥೆಗಳು, ಆಸಕ್ತ ಸ್ವಯಂ ಸೇವಕರು ಈ ಸ್ವಚ್ಛತೆಯ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜನವರಿ-30 ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ದಿನವಾಗಿದ್ದು ಸ್ವಚ್ಛ ಭಾರತದ ಕನಸು ಕಂಡಿದ್ದ ಗಾಂಧೀಜಿಯವರ ಸ್ಮೃತಿ ದಿನವಾದ ಈ ದಿನ ನಗರದ ಎಲ್ಲಾ ಸರಕಾರಿ ಕಚೇರಿಗಳ ಸಿಬ್ಬಂದಿಗಳು, ಶಾಲಾ – ಕಾಲೇಜುಗಳ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು, ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಕಚೇರಿಯ ಆವರಣದ, ವ್ಯವಹಾರ ಸ್ಥಳದ ಮುಂಭಾಗದ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳದಲ್ಲಿ ಸಂಜೆ 400ರಿಂದ 4.30 ತನಕ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳ ಬೇಕೆಂಬುದು ನಗರ ಪಂಚಾಯತ್ ವತಿಯಿಂದ ವಿನಂತಿಸಲಾಗಿದೆ.

