
ಸುಳ್ಯ : ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಅಕ್ರಮ ಮರಳುಗಾರಿಕೆ ಪಯಸ್ವಿನಿ ನದಿದಡದಲ್ಲಿ ನಡೆಯುತ್ತಿದೆ, ಇದರಿಂದ ಸರಕಾರಕ್ಕೆ ಬರತಕ್ಕ ರಾಜಧನ ತಲುಪದೆ ಸರಕಾರಕ್ಕೆ ನಷ್ಟವಾಗುತ್ತಿದೆ, ಅಕ್ರಮ ಮರಳುಗಾರಿಕೆ ನಡೆಸುವವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೆಂಬಲದಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆಸುತ್ತಿದ್ದಾರೆ.ಅಧಿಕಾರಿಗಳು ಕಾನೂನು ಗಳನ್ನು ತನ್ನ ಬತ್ತಳಿಕೆಯಲಿಟ್ಟು ಬೇಕಾದಾಗ ಬಡಪಾಯಿಗಳ ಮೇಲೆ ಪ್ರಯೋಗಮಾಡುತ್ತಿದ್ದಾರೆ ಪಯಸ್ವಿನಿ ನದಿಯಲ್ಲಿ ಕೂಡಲೇ ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡಬೇಕು ಇದಕ್ಕೆ ಶಾಸಕರು ,ಸಚಿವರು ಸ್ಪಷ್ಟ ನಿರ್ದೇಶನ ಮಾಡಿದಲ್ಲಿ ಇದು ಸಾದ್ಯ,ಎಂಬ ಬೇಡಿಕೆ ಇರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ನಡೆಸಲಾಗುವುದು, ಮೂರು ದಿನ ಕಳೆದ ಮೇಲು ಶಾಸಕರು ಸ್ಪಂದನೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನೀಡಲಾಗುವುದು ಎಂದರು.



ಪ್ರತಿಭಟನೆ ನಡೆಸುವುದಾಗಿ ಒಕ್ಕೂಟದ , ಅನಿಲ್ ಪರಿವಾರಕಾನ ,ಅಜಿತ್ ಪೇರಾಲು, ಜಯರಾಮ ಭಾರದ್ವಾಜ್, ರಿಫಾಯಿ ಪೈಚಾರ್, ದಾಮೋದರ ನೀರ್ಪಾಡಿ, ತಾರನಾಥ ಕೊಡೆಂಚಿಕಾರ್ ಮೊದಲಾದವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ಕರೆದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು ,ಆದರೆ ಅನಿಲ್ ಪರಿವಾರಕಾನ ಹೊರತುಪಡಿಸಿ ಉಳಿದವರು ಪ್ರತಿಭಟನೆಯಲ್ಲಿ ಭಾಗವಹಿಸದೆ ಹಿಂದುಳಿದಿದ್ದಾರೆ, ಈ ಬಗ್ಗೆ ಅನಿಲ್ ರನ್ನು ಪ್ರಶ್ನೆ ಮಾಡಿದಾಗ ಅವರಿಗೆ ಅಧಿಕಾರಿಗಳಿಂದ ಬೆದರಿಕೆ ಕರೆಗಳು ಹೋಗಿರಬಹುದು, ಆದರೆ ನಾನು ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ, ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದರು.
ಸ್ಥಳಕ್ಕೆ ಧಾವಿಸಿ ಬಂದ ತಹಶೀಲ್ದಾರ್
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಪ್ರತಿಭಟನೆ ನಡೆಸುತ್ತಿದ್ದ ಅನಿಲ್ ರ ಬಳಿ ಬಂದು ನನ್ನಿಂದ ಏನಾಗಬೇಕು ಎಂದು ಕೇಳಲಾಗಿ,ಅನಿಲ್ ಉತ್ತರಿಸಿ ಇದು ಜಿಲ್ಲಾಮಟ್ಟದ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಜಿಲ್ಲೆಯಲ್ಲಿ ಪರಿಹಾರವಾಗಬೇಕು, ಇದಕ್ಕೆ ಶಾಸಕರು ಮನಸು ಮಾಡಬೇಕು, ಅಕ್ರಮ ಮರಳುಗಾರಿಕೆ ವಿರುದ್ದ ಕ್ರಮವಹಿಸಬೇಕು ಎಂದು ಕೇಳಿಕೊಂಡರು, ತಹಶೀಲ್ದಾರ್ ಸ್ಪಂಧಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
