
ಕೆ ವಿ ಜಿ ಡೆಂಟಲ್ ಕಾಲೇಜಿನ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ವಿಶಾಕ್ ಎನ್ನುವ ಯುವಕ.ಡಿ 21 ಸ್ನೇಹಿತ ಝೈದ್ದಿನ್ ಹಜೀಲ್ ನನ್ನು ಸ್ಪಂದನ ಪಿ ಜಿ ಕಡೆಗೆ ಡ್ರಾಪ್ ಮಾಡಲು ಹೋಗುತ್ತಿರುವಾಗ ಸುಳ್ಯ ಕುರುಂಜಿಭಾಗ್ ಕೆ.ವಿ.ಜಿ. ಐಪಿಎಸ್ ಸ್ಕೂಲ್ ನ ಹತ್ತಿರ ತಲುಪುತ್ತಿದ್ದಂತೆ ಇನ್ನೋವಾ ಕಾರೊಂದು ಬೆನ್ನಟ್ಟಿ ಬಂದು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹರೀಶ್, ಪಲ್ಲವಿ ಹಾಗೂ ಪಲ್ಲವಿ ಸಹೋದರ ಮತ್ತು ಅಪರಿಚಿತ ವ್ಯಕ್ತಿಯೊಬ್ಬ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಕ್ ಲಿವರ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಕೇರಳ ಮೂಲದ ವಿದ್ಯಾರ್ಥಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಈ ಪ್ರಕರಣ ಆರೋಪಿತರಾಗಿರುವವರು ,ದೂರು ದಾಖಲಾಗುವ ಮೊದಲು ಈ ಪ್ರಕರಣದಲ್ಲಿ ದೂರು ನೀಡಿರುವ ವಿಶಾಕ್ ಜಿ ಪನಿಕರ್ ವಿರುದ್ದ ಜಾತಿ ನಿಂದನೆ , ಸ್ಟೇಟಸ್ ಹಾಕಿದ ಕಾರಣಕ್ಕೆ ಹಲ್ಲೆ, ರಾಗಿಂಗ್ ನಡೆಸಿದ ಬಗ್ಗೆ ಆರೋಪಿಸಿ ಠಾಣೆಗೆ ದೂರು ನೀಡಿದ್ದರು.ಪೊಲಿಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದರು, ಇದೀಗ ಸುಳ್ಯ ಡೆಂಟಲ್ ಕಾಲೇಜಿನ ಇತ್ತಂಡದ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕೈ ಮಿಲಾಯಿಸಿ, ಠಾಣೆ ಮೆಟ್ಟಿಲೇರಿದ್ದಾರೆ.

