
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಅಧೀನದಲ್ಲಿರುವ ರಬ್ಬರ್ ಬೋರ್ಡನ್ನು ನೀತಿ ಆಯೋಗ ಕೊಟ್ಟಿರುವ ವರದಿಯ ಆಧರಿಸಿ ಮುಚ್ಚಲು ಹೊರಟಿರುವುದು ಖಂಡನೀಯ ಕೇಂದ್ರ ಸರಕಾರದ ಈ ನಿರ್ಧಾರವನ್ನು ನಾವು ವಿರೋದಿಸುತ್ತೇವೆ ಎಂದು ಕೇಂದ್ರ ನಾರುಮಂಡಳಿಯ ಮಾಜಿ ಸದಸ್ಯ ಟಿ ಎಂ ಶಹೀದ್ ಹೇಳಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಡಿ.೨೪ ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ. ರಬ್ಬರ್ ಬೋರ್ಡ್ ಒಂದು ಸಾಂವಿದಾನಿಕ ರಚಿಸಲ್ಪಟ್ಟ ಸಂಸ್ಥೆ ನೀತಿ ಆಯೋಗ ರಬ್ಬರ್ ಬೋರ್ಡ್ ರದ್ದು ಮಾಡಿಅದನ್ನು ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗಕ್ಕೆ ಹಸ್ತಾಂತರ ಮಾಡಲು ವರದಿ ನೀಡಿದ್ದು ಇದನ್ನು ಈ ವರದಿ ಆದರಿಸಿ ಸರಕಾರ ರಬ್ಬರ್ ಬೋರ್ಡ್ ಮುಚ್ಚಲು ಪ್ರಯತ್ನ ಪಟ್ಟಿದಾದಲ್ಲಿ, ಇದರಿಂದ ರಾಜ್ಯದಲ್ಲಿ ರಬ್ಬರ ಬೆಳೆಗಾರರಿಗೆ ತೊಂದರೆಯಾಗುತ್ತದೆ, ಸಬ್ಸಿಡಿ ರದ್ದಾಗುತ್ತದೆ, ತರಭೇತಿ ಇಲ್ಲದಾಗ್ತದೆ, ಹಾಗೂ ರಬ್ಬರ್ ಕೃಷಿಕರಿಗೆ ಅಥವಾ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಇಲ್ಲವಾಗುತ್ತದೆ, ಈಗಾಗಲೆ ೬೦೦೦೦ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯುತ್ತಿದ್ದು ಸಾವಿರಾರು ಮಂದಿ ರಬ್ಬರ್ ಬೆಳೆಯವ ರೈತರಿಗೆ ಅನ್ಯಾಯ ಆಗುತ್ತದೆ, ರೈತರ ಹಿತದೃಷ್ಟಿಯಿಂದ ಈ ಭಾಗದ ಸಚಿವರು, ಲೋಕಸಭಾ ಸದಸ್ಯರು ಪ್ರಯತ್ನ ಮಾಡಿ ರಬ್ಬರ್ ಬೋರ್ಡ್ ಅನೂರ್ಜಿತ ವಾಗದಂತೆ ನೋಡಿಕೊಳ್ಳಬೇಕು ಎಂದರು.ರಬ್ಬರ್ ಸುಳ್ಯ ಬಾಗದಲ್ಲಿ ಮುಖ್ಯ ಬೆಳೆಗಳಲ್ಲಿ ಒಂದು,ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗ ದಿಂದ ಕಂಗಾಲಾದ ರೈತರು ರಬ್ಬರ್ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ, ನೆರೆಯ ಕೇರಳ ರಾಜ್ಯದಲ್ಲಿ ರಬ್ಬರ್ ಗೆ ಬೆಂಬಲ ಬೆಲೆ ನೀಡುತ್ತಿದ್ದಾರೆ, ನಮ್ಮ ರಾಜ್ಯದಲ್ಲಿ ಯಾಕೆ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.



ಮುಂದಿನ ಬಾರಿ ನಮ್ಮ ಸರಕಾರ ಬಂದಲ್ಲಿ ರಬ್ಬರ್ ಪ್ಯಾಕ್ಟರಿಗಳನ್ನು ನಿರ್ಮಿಸಿ ರಬ್ಬರ್ ಗೆ ಉತ್ತಮ ದಾರಣೆಯಾಗುವಂತೆ ಮಾಡುತ್ತೇವೆ.ಯಾವುದೇ ಕಾರಣಕ್ಕೂ ರಬ್ಬರ್ ಬೋರ್ಡ್ ರದ್ದಾಗಬಾರದು ಎಂದು ಆಗ್ರಹ ವ್ಯಕ್ತಪಡಿಸಿದರು.

ಗೋರಕ್ಷಣೆಯಲ್ಲಿ ಸರಕಾರ ವೈಪಲ್ಯ:
ಗೋ ರಕ್ಷಣೆ ಮಾಡುತ್ತೇವೆ ಎಂದು ಹೇಳಿ ಆಡಳಿತಕ್ಕೆ ಬಂದ ಸರಕಾರ ಅಧಿಕಾರಕ್ಕೆ ಬಂದಮೇಲೆ ಗೋವಿನ ವ್ಯಥೆ ಕೇಳುತ್ತಿಲ್ಲ ರಾಜ್ಯದಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾಗಿರುವ ಜಾನುವಾರುಗಳು ಸಾಯುತ್ತಿದ್ದು,ಈಗಾಗಲೆ 65000 ದನಗಳು ನಷ್ಟವಾಗಿವೆ ಗೋವುಗಳಿಗೆ ನೀಡಬೇಕಾದ ಔಷದ ಹಾಗೂ ಇನ್ನಿತರ ಸೌಲಭ್ಯ ನೀಡುತ್ತಿಲ್ಲ, ರಾಜ್ಯ ಸರಕಾರ,ಕೂಡಲೆ ಜಾನುವಾರುಗಳ ಚರ್ಮ ಗಂಟು ರೋಗಕ್ಕೆ ಪರಿಹಾರ ನೀಡಬೇಕು ರಾಜ್ಯದ ಹೈನುಗಾರರನ್ನು ಉಳಿಸುವ ಕೆಲಸ ಸರಕಾರ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಅಬುಸಾಲಿ, ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಸಿದ್ದಿಕ್ ಕೊಕ್ಕೋ, ,ಹನೀಪ್ ಬೀಜಕೊಚ್ಚಿ, ರಹೀಮ್ ಬೀಜದಕಟ್ಟೆ,ಮೊದಲಾದವರಿದ್ದರು.
