
ಸಹನೆ ಬದುಕಿನ ಭಾಗವಾಗಿರಲಿ ,ಸಂಸಾರದಲ್ಲಿ ಯಾವದೇ ಘಟನೆಗಳು ನಡೆದಾಗ ಆ ಕ್ಷಣಕ್ಕೆ ಪ್ರತಿಕ್ರೀಯೆ ನೀಡದಿರಿ,ಸಮಯ ಕಳೆದಾಗಲೆಲ್ಲ ಸಹನೆಯಿಂದ ಕಾದರೆ ಪಲಿತಾಂಶ ಒಳ್ಳೆಯದೇ ಆಗುತ್ತದೆ, ಈ ದೇಶದ ತಾಯಿಗಿರುವ ಸಹನೆ, ಈ ದೇಶದ ರೈತನಿಗಿರುವ ಸಹನೆ ನಿಮ್ಮದಾಗಿರಲಿ, ಕಷ್ಟದ ಸಂದರ್ಭದಲ್ಲಿ ಆಂತರಿಕ ಶಕ್ತಿಗಳನ್ನು ದ್ವಿಗುಣವಾಗಿಸಿಕೊಂಡರೆ,ಕಷ್ಟಗಳು ಕಳೆದು ಹೋಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.
ಧರ್ಮ ಜಾಗೃತಿಗಾಗಿ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮ ಕೈಗೊಂಡಿರುವ ಅವರು ಗ್ರಾಮ ವಾಸ್ತವ್ಯದ 2 ನೆ ದಿನದಲ್ಲಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು ಅವರ ಮನೆಯಲ್ಲಿ ವಿಶ್ರಾಂತಿ ನಡೆಸಲು ಆಗಮಿಸಿದ ಸಂದರ್ಭದಲ್ಲಿ ನೆರೆದ ಭಕ್ತರನ್ನೂ ಉದ್ದೇಶಿಸಿ ಆಶೀರ್ವಚನ ಮಾಡಿದರು.



ಗುರುವಂದನೆ ಹಾಗು ಪಾದಪೂಜೆ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲ ನಾಥ ಸ್ವಾಮೀಜಿ ಉಪಸ್ಥಿತರಿದ್ದು ಭಜನೆಯನ್ನು ಬೋಧಿಸಿದರು. ಡಾ.ಲಕ್ಷ್ಮೀಶ ದಂಪತಿಗಳುಅವರು ಗುರುವಂದನೆ ಸಲ್ಲಿಸಿ ಪಾದಪೂಜೆ ನೆರವೇರಿಸಿದರು. ಕೆವಿ ಜಿ ಅಕಾಡೆಮಿ ಅಧ್ಯಕ್ಷ ಡಾ.ಕೆ ವಿ ಚಿದಾನಂದ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ ಕೆ ವಿ ರೇಣುಕಾ ಪ್ರಸಾದ್ ಕೆ.ವಿ.ಹೇಮನಾಥ, ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಉಧ್ಯಮಿ ಸತೀಶ್ ಡಿ.ವಿ, ಪ್ರಮುಖರಾದ , ಕೆ.ಆರ್.ಗಂಗಾಧರ ಭವಾನಿ ಶಂಕರ ಅಡ್ತಲೆ,ಡಾ.ಎನ್.ಎ.ಜ್ಞಾನೇಶ್, ಅಕ್ಷಯ್ ಕುರುಂಜಿ, ಚಂದ್ರಶೇಖರ ಪೇರಾಲು, ,ಮತ್ತಿತರರು ಉಪಸ್ಥಿತರಿದ್ದರು.
