ಡಾ.ಕೆ.ವಿ.ಚಿದಾನಂದ ಅವರ ಮನೆಯಲ್ಲಿ ಡಾ. ಆದಿಚುಂಚನಶ್ರೀಗಳಿಗೆ.ಗುರುವಂದನೆ ಹಾಗು ಪಾದಪೂಜೆ.

ಡಾ.ಕೆ.ವಿ.ಚಿದಾನಂದ ಅವರ ಮನೆಯಲ್ಲಿ ಡಾ. ಆದಿಚುಂಚನಶ್ರೀಗಳಿಗೆ.ಗುರುವಂದನೆ ಹಾಗು ಪಾದಪೂಜೆ.

ಆದುನಿಕ ಬದುಕಿನ ಜಂಜಾಟದಲ್ಲೂ ನಮ್ಮನ್ನು ನಾವು ಸತ್ಸಂಗ ಬಜನೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ,ಭಜನೆಯಿಂದ ನಮ್ಮನ್ನು ನಾವೆ ತೊಡಗಿಸಿ ಕೊಂಡದಾದಲ್ಲಿ ಯಾವ ಓಷದಿಯೂ ಬದುಕಲ್ಲಿ ಬೇಕಿಲ್ಲ ಎಂದು ಹೇಳಿದರಲ್ಲದೆ ಗುರು ಪೀಠಕ್ಕೆ ವಜ್ರ ಕಚಿತ ಕಿರೀಟ ನೀಡಿದವರು ಕುರುಂಜಿಯವರು ಎನ್ನುವ ಸಂತೋಷವಿದೆ , ಡಾ ಕೆ ವಿ ಚಿದಾನಂದರು ಮಠದ ಭಾಂದವ್ಯದಲ್ಲಿ ತಂದೆಯ ಪರಂಪರೆ ಉಳಿಸಿಕೊಂಡಿದ್ದಾರೆ ಎಂದರು , ಧರ್ಮ ಜಾಗೃತಿಗಾಗಿ ಸುಳ್ಯ ತಾಲೂಕಿನ ಹಲೆವೆಡೆ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ‌

ಕಾರ್ಯಕ್ರಮಕ್ಕೆ ಆಗಮಿಸಿರುವ ಅವರು ಡಿ.22 ರ ಸಂಜೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರ ಮನೆಯಲ್ಲಿ ನಡೆದ.ಗುರುವಂದನೆ ಹಾಗು ಪಾದಪೂಜೆ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು. ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಕೆ ವಿ ಜಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಪ್ರೋ ಕಬಡ್ಡಿ ಆಟಗಾರ ಅಭಿಷೇಕ ಪಾಂಡವಪುರ ಮಂಡ್ಯ ರವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಡಾ.ಕೆ.ವಿ.ಚಿದಾನಂದ, ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ.ಅವರು ಗುರುವಂದನೆ ಸಲ್ಲಿಸಿ ಪಾದಪೂಜೆ ನೆರವೇರಿಸಿದರು. ಕೆ.ವಿ.ಹೇಮನಾಥ, ಜಗದೀಶ್ ಅಡ್ತಲೆ, ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಗೌಡ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ