
ಸುಳ್ಯದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಕೃಷಿಮೇಳದ ಎರಡನೇ ದಿನದ ಸಭಾ ಕಾರ್ಯಕ್ರಮ ಕುರುಂಜಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾ.ಕೆ ವಿ ಚಿದಾನಂದ ವಹಿಸಿದ್ದರು, ಕಾರ್ಯಕ್ರಮದಲ್ಲಿ ಪಂಜದ ಕಾಯಕಯೋಗಿ ತನ್ನ 6 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಮಾಡಿ ಸಾಧನೆಯನ್ನು ಮಾಡಿರುವ ತಿಮ್ಮಪ್ಪ ನಾಯ್ಕ , ಕೇವಲ 2 ಎಕರೆ ಭೂಮಿಯಲ್ಲಿ ಅಡಿಕೆ, ಬಾಳೆ, ತೆಂಗು, ಜೇನು ಸೇರಿದಂತೆ ವಿವಿಧ ಕೃಷಿಯಲ್ಲಿ ಯಶಸ್ವಿಯಾಗಿರುವ ಅಜ್ಜಾವರ ಗ್ರಾಮದ ಸುಂದರ ಮುದರ, ಕೃಷಿಯಲ್ಲಿ ತೊಡಗಿ ವಾಣಿಜ್ಯ ಬೆಳೆಗಳ ಮೂಲಕ ಯಶಸ್ವಿ



ಕೃಷಿಕರಾಗಿ ಗುರುತಿಸಿಕೊಂಡಿರುವ ಪಿ.ಬಿ ಪ್ರಭಾಕರ ರೈ, ಇಂಜಿನಿಯರ್ ಆಗಿದ್ದರೂ ಕೆಲಸ ತ್ಯಜಿಸಿ ಜೇನು ಕೃಷಿಯಲ್ಲಿ ತೊಡಗಿ ಸುಮಾರು850 ಪೆಟ್ಟಿಗೆಯಲ್ಲಿ ಜೇನು ಕೃಷಿಯಲ್ಲಿ ತೊಡಗಿರುವ ವಿವೇಕ ಪಡ್ಪು ರವರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನೀಡಿ ಮಾತನಾಡಿದ ಮಂಗಳೂರು ಇಸ್ಕಾನ್ ಅಧ್ಯಕ್ಷ ಶ್ರೀ ಗುಣಕರ ರಾಮದಾಸ್ ಆಶೀರ್ವಚನ ನೀಡಿ ಕೃಷಿ ಮತ್ತು ಧಾರ್ಮಿಕತೆಗೆ ಅವಿನಾಭಾವ ಸಂಬಂಧವಿದೆ ,ಭೂಮಿ ತಾಯಿ ಇದ್ದಂತೆ, ಇದನ್ನು ಪಾಲನೆ ಮಾಡಬೇಕಾದ ಅವಶ್ಯಕತೆ ಇದೆ,ಸಾವಯವ ಕೃಷಿಯ ಮೂಲಕ ನಮ್ಮ ಭೂಮಿಯನ್ನು ಪುನರ್ಜೀವನ ಗೊಳಿಸಲು ನಮ್ಮೆಲ್ಲಾ ರೈತರು ಕಾರ್ಯೋನ್ಮುಕವಾಗಬೇಕಿದೆ. ಇತ್ತೀಚೆಗೆ ಹಳ್ಳಿಗಳು ವೈಜ್ಞಾನಿಕವಾಗಿದೆ ಎಂದರು.ವೇದಿಕೆಯಲ್ಲಿ ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಹಿರಿಯ ಸಹಕಾರಿ ಜಾಕೆ ಮಾಧವ

ಗೌಡ,ವೆಂಕಟ್ರಮಣ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ,ಮಾಜಿ ಜಿಲ್ಲಾ ಪಂ ಸದಸ್ಯ ಹರೀಶ್ ಕಂಜಿಪಿಲಿ,ಪ್ರಣವ ಸಹಕಾರಿ ಸಂಘದ ಅಧ್ಯಕ್ಷ, ಜಿ ಆರ್ ಪ್ರಸಾದ್, ಎನ್ .ಎ ಜ್ಞಾನೇಶ್, ಸಂತೋಷ್ ಕುತ್ತಮೊಟ್ಟೆ, ಮೊದಲಾದವರಿದ್ದರು ವೀರಪ್ಪ ಗೌಡ ಕಣ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಸಂತೋಷ್ ಜಾಕೆ ಸ್ವಾಗತಿಸಿ, ಎನ್ ಎ ಜ್ಞಾನೇಶ್ ವಂದಿಸಿದರು. ಕೆ ಟಿ ವಿಶ್ವನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.
