ಡಿ.20,21,22 ರಂದು ಆದಿಚುಂಚನಗಿರಿ ಮಹಾ ಸ್ವಾಮೀಜಿಯವರು ಸುಳ್ಯ ಭೇಟಿ: ಸಿಧ್ದತೆಗಾಗಿ ಒಕ್ಕಲಿಗರ ರಾಜ್ಯ ಉಪಾದ್ಯಕ್ಷರಿಂದ ಮನವಿ.

ಡಿ.20,21,22 ರಂದು ಆದಿಚುಂಚನಗಿರಿ ಮಹಾ ಸ್ವಾಮೀಜಿಯವರು ಸುಳ್ಯ ಭೇಟಿ: ಸಿಧ್ದತೆಗಾಗಿ ಒಕ್ಕಲಿಗರ ರಾಜ್ಯ ಉಪಾದ್ಯಕ್ಷರಿಂದ ಮನವಿ.

ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿ
ಮಹಾ ಸಂಸ್ಥಾನ ಮಠದ ಪರಮ ಪೂಜ್ಯ
ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಗ್ರಾಮ ದರ್ಶನ ಪಾದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು.ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿಬಂದ ಯೋಗ ಭಾಗ್ಯವೆಂದು ಪರಿಗಣಿಸಿ, ನಾವೆಲ್ಲರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಪೂಜ್ಯರ ಆಗಮನದ ಪೂರ್ವ ಸಿದ್ಧತೆಗಾಗಿ ತಯಾರಾಗಬೇಕಾಗಿದೆ. ಆದುದರಿಂದ ಸುಳ್ಯ ತಾಲೂಕಿನ ನಮ್ಮ ಸಮುದಾಯದವರು ಪೂಜ್ಯ ಸ್ವಾಮೀಜಿಯವರ ಸರ್ವ ಕಾರ್ಯಗಳಲ್ಲಿ ಭಾಗವಹಿಸಿ, ಜವಾಬ್ದಾರಿ ನಿರ್ವಹಿಸಬೇಕಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರ ನೆಲೆಯಲ್ಲಿ ಮತ್ತು ನಿಮ್ಮೆಲ್ಲರ ಆತ್ಮೀಯ ಬಂಧುವಾಗಿ ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಾಜ್ಯ ಒಕ್ಕಲಿಗರ ಸಂಘ (ರಿ), ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ. ವಿ. ಸುಳ್ಯ ಒಕ್ಕಲಿಗ ಕುಲ ಬಾಂಧವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ರಾಜ್ಯ