ಡಿ.5 ರಂದು ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ ಶರೀಅತ್ ಕಾಲೇಜಿನ ಪ್ರಥಮ ಪದವಿ ಪ್ರದಾನ

ಡಿ.5 ರಂದು ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ ಶರೀಅತ್ ಕಾಲೇಜಿನ ಪ್ರಥಮ ಪದವಿ ಪ್ರದಾನ

ಡಿ.5 ರಂದು ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ನ ವತಿಯಿಂದ ನಡೆಸಲ್ಪಡುತ್ತಿರುವ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನ್ಸಾರಿಯಾ ನಿರ್ದೇಶಕ ಕೆ.ಎಸ್.ಉಮ್ಮರ್ ಅನ್ಸಾರಿಯಾ ಸಂಸ್ಥೆಯ 21ನೇ
ವಾರ್ಷಿಕ ಸ್ವಲಾತ್ ಬುರ್ದಾ ಮಜ್ಲಿಸ್ ನಡೆಯುತ್ತಿದೆ. ಡಿ.2ರಿಂದ ಕಾರ್ಯಕ್ರಮ ಆರಂಭಗೊಂಡಿದ್ದು, ಡಿ.5ರಂದು ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ. ಅಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಡ ಮತ್ತು ನಿರ್ಗತಿಕ ಮಕ್ಕಳ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದಿಂದ ಆರಂಭಗೊಂಡ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಸಂಸ್ಥೆಯು ದಅವಾ ಕಾಲೇಜು, ಮಹಿಳಾ ಶರೀಅತ್ ಕಾಲೇಜು, ಗ್ರೀನ್ ವ್ಯೂ ಇಂಗ್ಲೀಷ್ ಮೀಡಿಯಂ ಶಿಕ್ಷಣ ಸೇರಿದಂತೆ,ಹಲವು ವ್ಯವಸ್ಥೆ ಮಾಡಲಾಗಿದೆ. ಗ್ರೀನ್ ವ್ಯೂ ಶಿಕ್ಷಣ ಕೇಂದ್ರದಲ್ಲಿ ಎಲ್ಲಾ ಧರ್ಮದವರಿಗೂ ಶಿಕ್ಷಣ ಕಲಿಸಲಾಗುತ್ತದೆ ಎಂದು ಹೇಳಿದರು
ಪತ್ರಿಕಾಗೋಷ್ಠೀಯಲ್ಲಿ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಪ್ರಮುಖರಾದ ಶರೀಫ್ ಕಂಠಿ, ಮಹಮ್ಮದ್ ಊವೈಸ್, ಹಮೀದ್ ಬೀಜಕೊಚ್ಚಿ,ಅಬ್ದುಲ್ ಖಾದರ್ ಪಟೇಲ್ ಉಪಸ್ಥಿತರಿದ್ದರು

ರಾಜ್ಯ