ಕೆಂಬಾವುಟದ ಮೇಲಿ ದೇಶದ್ರೋಹದ ಅಪಪ್ರಚಾರ ಈ  ದೇಶದ ಕಾರ್ಮಿಕರನ್ನು ದೇಶದ್ರೋಹಿ ಎಂದು ಕರೆದಂತೆ: ಬಿ ಎಮ್ ಭಟ್

ಕೆಂಬಾವುಟದ ಮೇಲಿ ದೇಶದ್ರೋಹದ ಅಪಪ್ರಚಾರ ಈ ದೇಶದ ಕಾರ್ಮಿಕರನ್ನು ದೇಶದ್ರೋಹಿ ಎಂದು ಕರೆದಂತೆ: ಬಿ ಎಮ್ ಭಟ್

ಕಾರ್ಮಿಕ ಸಂಘಟನೆಯ ಕೆಂಪು ಬಾವಟದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ .ಈ ಮೂಲಕ ಕಾರ್ಮಿಕ ಸಂಘಟನೆಯ ಒಡೆಯವ ಕೆಲಸಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆ ಸಿಐಟಿಯು ಆಪಾದಿಸಿದೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಕೆಂಬಾವುಟ ಯಾವುದೇ ರಾಜಕೀಯ ಪಕ್ಷದ ಬಾವುಟವಲ್ಲ,ಇದು ಕಾರ್ಮಿಕ ಸಂಘಟನಯ ಬಾವುಟ , ಚಿಕಾಗೋದಲ್ಲಿ ನಡೆದ ಹೋರಾಟದ ಪ್ರತೀಕ ಈ ಬಾವುಟ ಕಾರ್ಮಿಕರ ಹೋರಾಟ ಸ್ವಾತಂತ್ರ್ಯ ಚಳುವಳಿಯ ಒಂದು ಭಾಗ ದೇಶದ್ರೋಹಿಗಳಿಗೆ ಮಾತ್ರ ಕಾರ್ಮಿಕರು ದೇಶ ದ್ರೋಹಿಗಳಾಗಿ

ಕಾಣುತ್ತಾರೆ.ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ಕಿಟ್‌, ಬಸ್ ಪಾಸ್ ಗಳ ಹೆಸರಲ್ಲಿ ಲೂಟಿ ಮಾಡುತ್ತಿರುವ ರಾಜ್ಯ ಸರಕಾರ ಕಾರ್ಮಿಕರ ಹಕ್ಕು ಮತ್ತು ಸವಲತ್ತುಗಳನ್ನು ಕಸಿದುಕೊಂಡಿದೆ. ಈ ಮೂಲಕ ಕಾರ್ಮಿಕರಿಗೆ ಸರಕಾರ ಅನ್ಯಾಯ ಮಾಡುತ್ತಿದೆ. ಕಿಟ್ ಸರಕಾರದ ಕೊಡುಗೆ ಅಲ್ಲ. ಅದು ಕಾರ್ಮಿಕ ಮಂಡಳಿಯ ಹಣ. ಕಾರ್ಮಿಕರಿಗೆ ಬಸ್ ಪಾಸು ನೀಡಲು ನಿರ್ಧರಿಸಿದ ಸರಕಾರ ಅದರ ಬದಲು ಆ ಹಣವನ್ನು ಕಾರ್ಮಿಕರ ಖಾತೆಗೆ ನೀಡಬೇಕು.ಬಸ್ ಪಾಸ್ ಯೋಜನೆಯೇ ಮುಳುಗುತ್ತಿರುವ ಕೆ ಎಸ್ ಆರ್ ಟಿ ಸಿ ಸಂಸ್ಥೆಯನ್ನು ಉಳಿಸಿಕೊಳ್ಳುವ ತಂತ್ರ. ಕಾರ್ಮಿಕರ ಮದುವೆ ಧನ ಸಹಾಯ, ಪಿಂಚಣಿ, ವಿದ್ಯಾರ್ಥಿ ವೇತನ, ಕಾರ್ಮಿಕರ‌ ವೇತನವನ್ನು ಎಲ್ಲಾ ಕಾರ್ಮಿಕರಿಗೆ ನೀಡಬೇಕು.5 ವರ್ಷದ ಹಿಂದೆ ಸರಕಾರ ನಿಗದಿ ಪಡಿಸಿದ ಬೀಡಿ ಕಾರ್ಮಿಕರ ವೇತನವನ್ನು ಕಳೆದ ನಾಲ್ಕೂವರೆ ವರ್ಷದಿಂದ ರೂ.೩೦ ಸಾವಿರದಂತೆ ಬಾಕಿ ಮಾಡಿದ ಮಾಲಕರ ಪರ ಸರಕಾರ ನಿಂತಿದೆ, ಅಂಗನವಾಡಿ ಬಿಸಿಯೂಟ ನೌಕರರಿಗೆ ಎರಡು ಮೂರು ತಿಂಗಳಿನಿಂದ ವೇತನ ನೀಡಲು ಆಗದ ಇಂತಹ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು

ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ
ಸಿಐಟಿಯುವ ಮುಖಂಡರಾದ ಕೆ.ಪಿ. ಜಾನಿ ಬಿಜು ಅಗಸ್ಟಿನ್, ವಿಶ್ವನಾಥ ನೆಲ್ಲಿಬಂಗಾರಡ್ಕ, ಶಿವರಾಮ ಗೌಡ, ವಿಜಯ ಮೇಸ್ತ್ರೀ, ಉಸ್ಮಾನ್ ಜಯನಗರ, ವಿ.ಗಣೇಶ್, ವಿ.ಆರ್. ಪ್ರಸಾದ್ ಮೊದಲಾದವರಿದ್ದರು.

ರಾಜ್ಯ