ಸಂಪಾಜೆ ಕಾಂಗ್ರೇಸ್ ನಲ್ಲಿ ಸರಣಿ ರಾಜಿನಾಮೆ :ಪಕ್ಷಕ್ಕೆ ಭಾರೀ ಮುಜುಗರ.

ಸಂಪಾಜೆ ಕಾಂಗ್ರೇಸ್ ನಲ್ಲಿ ಸರಣಿ ರಾಜಿನಾಮೆ :ಪಕ್ಷಕ್ಕೆ ಭಾರೀ ಮುಜುಗರ.

ಲಿಸ್ಸಿ ಮೊನಾಲಿಸಾ

ಸಂಪಾಜೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ್ ಕೊಯಿಂಗಾಜೆ ರಾಜಿನಾಮೆ ನೀಡಿದ ಬೆನ್ನಲ್ಲೆ, ಹಲವರು ರಾಜೀನಾಮೆ ನೀಡುತ್ತಿದ್ದಾರೆ. ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಲಿಸ್ಸಿ ಮೊನಾಲಿಸ, ಪಂಚಾಯತ್ ಸದಸ್ಯ ಶವಾದ್ ಗೂನಡ್ಕ ಮತ್ತೊಬ್ಬರು ಸದಸ್ಯೆ ವಿಮಲಾ ಪ್ರಸಾದ್ ಪಂಚಾಯತ್ ಸದಸ್ಯತನಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ ಬ್ಲಾಕ್ ಕಾಂಗ್ರೇಸ್ ಉಪಾದ್ಯಕ್ಷ ಧರ್ಮಪಾಲ ಕೊಯಿಂಗಾಜೆ, ಸಂಪಾಜೆ ವಲಯ ಕಾಂಗ್ರೇಸ್ ಉಪಾದ್ಯಕ್ಷ ಎ.ಕೆ ಇಬ್ರಾಹಿಂ ಸಂಪಾಜೆ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರುಡಾಲ್ಫ್ ಸಂಪಾಜೆ

ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಟ್ಟಿದ್ದಾರೆ ಮತ್ತು ಹಲವು ಮಂದಿ ಪಕ್ಷ ತೊರೆಯುವ ಹಂತದಲ್ಲಿದ್ದಾರೆ.ಈ ಮೂಲಕ ಸಂಪಾಜೆ ಕಾಂಗ್ರೇಸ್ ನಲ್ಲಿ ನಡೆದ ಕೋಲಾಹಲ ತಾಲೊಕು ವ್ಯಾಪಿಯಾಗಿ ಹರಡುತ್ತಿದೆ. ವಿಧಾನಸಭೆಯ ಚುನಾವಣೆ ಸನಿಹ ವಾಗುತ್ತಿದ್ದಂತೆ, ಕಾಂಗ್ರೇಸ್ ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಬಿ ಜೆ ಪಿ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ರಾಜ್ಯ