ರಾಜ್ಯ

ಪಿಎಸ್‌ಐ ಜೀಪಿನಿಂದಲೇ ವಾಕಿಟಾಕಿ ಕಳವು!!

ಉಳ್ಳಾಲ: ಪೊಲೀಸ್ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿ, ಕಳವಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆಯ ಪಿಎಸ್‌ಐ ಧನರಾಜ್ ಎಸ್ ಅವರು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ಹೊರಡುವಾಗ ಅವರಲ್ಲಿದ್ದ ವಾಕಿಟಾಕಿಗೆ ಚಾರ್ಜ್ ಇಲ್ಲದ ಕಾರಣ ಇನ್ನೊಂದು ಡಿಜಿಟಲ್ ವಾಕಿಟಾಕಿ ಒಯ್ದಿದ್ದರು.

ಇಲಾಖೆಯ ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಲ್ಲಾಪು ಬಳಿ, ಜನರು ಗುಂಪು ಸೇರಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವುದನ್ನು ಗಮನಿಸಿದ್ದಾರೆ ಪಿಎಸ್‌ಐ ಜೀಪ್ ನಿಲ್ಲಿಸಿ, ವಾಕಿಟಾಕಿಯನ್ನು ಸೀಟ್‌ನಲ್ಲಿಟ್ಟು ಜನರನ್ನು ಚದುರಿಸಿ ಬಂದು ನೋಡಿದಾಗ ವಾಕಿಟಾಕಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Response

error: Content is protected !!