ರಾಜ್ಯ

ಉಪ್ಪಿನಂಗಡಿ : ಆಕಸ್ಮಿಕ ಬೆಂಕಿ; ಸಂಪೂರ್ಣ ಅಗ್ನಿಗಾಹುತಿಯಾದ ಸ್ವೀಟ್ಸ್ ಮಳಿಗೆ

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಸಮತಾ ಸ್ವೀಟ್ಸ್ ಮಳಿಗೆಯಲ್ಲಿ ಬೆಂಕಿ ಹತ್ತಿಕೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಮಳಿಗೆಯು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಮಳಿಗೆಯನ್ನು ಬಂದ್ ಮಾಡಿ ಮಾಲಕರು ಮನೆಗೆ ತೆರಳಿದ್ದು, ತಡರಾತ್ರಿ ಮಳಿಗೆಯೊಳಗಿನಿಂದ ಹೊಗೆ ಬರುತ್ತಿರವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಮಳಿಗೆಯ ಷಟರ್ ತೆರೆಯುತ್ತಲೇ ಮಳಿಗೆಯೊಳಗೆ ಸಂಪೂರ್ಣ ಬೆಂಕಿಯ ಜ್ವಾಲೆ ತುಂಬಿ ಹೋಗಿತ್ತು. ಎಣ್ಣೆಯಂಶವುಳ್ಳ ಸಿಹಿತಿಂಡಿಗಳು ಹೆಚ್ಚು ಬೆಂಕಿ ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ.

ಸಾರ್ವಜನಿಕರು ಬೆಂಕಿ ನಂದಿಸಲು ನೆರವಾದರಾದರೂ ಬೆಂಕಿ ಹತೋಟಿಗೆ ಬಂದಿರಲಿಲ್ಲ. ನಂತರ ಬೆಳ್ತಂಗಡಿ ಹಾಗೂ ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು.ಮಳಿಗೆಯಲ್ಲಿದ್ದ ಫ್ರಿಡ್ಜ್ , ಕಪಾಟುಗಳು, ಸಿಹಿತಿಂಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿವೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿ ನಿರೀಕ್ಷಿಸಲಾಗಿದೆ.

Leave a Response

error: Content is protected !!