ರಾಜ್ಯ

ಉಪ್ಪಿನಂಗಡಿ : ಸಾಮಿಲ್ ನಲ್ಲಿ ಆಕಸ್ಮಿಕ ಬೆಂಕಿ

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಬಳಿ, ಇಳಂತಿಲ ಗ್ರಾಮದ ಮಾಣಿಮಾರು ಎಂಬಲ್ಲಿರುವ ಎವರೆಸ್ಟ್ ಮರದ ಸಾಮಿಲ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮರಮಟ್ಟು, ಯಂತ್ರೋಪಕರಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ಯು.ಟಿ. ಫಯಾಜ್ ಅಹಮ್ಮದ್ ಒಡೆತನದ ಸಾಮಿಲ್‌ನಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಹೊಗೆ ಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಕಟ್ಟಡಕ್ಕೆ ಧಾವಿಸಿದ ಮಾಲೀಕರು ಸಮೀಪದಲ್ಲೇ ಇದ್ದ ನೀರಿನ ವ್ಯವಸ್ಥೆಯಿಂದ ಬೆಂಕಿ ನಂದಿಸಿ, ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದರು. ಘಟನೆಯಿಂದ ಸುಮಾರು ₹6 ಲಕ್ಷದಷ್ಟು ಹಾನಿ ಅಂದಾಜಿಸಲಾಗಿದೆ.

ಯು.ಟಿ. ಫಯಾಜ್ ಅಹಮ್ಮದ್ ಈ ಭಾಗದಲ್ಲಿ ಯಾವುದೇ ಅವಘಡ ಸಂಭವಿಸಿದಾಗಲೂ ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸುವ ವ್ಯಕ್ತಿ. ಮಂಗಳವಾರ ಅವರ ಒಡೆತನ ಸಾಮಿಲ್‌ನಲ್ಲೇ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಭಗವಂತನ ಕೃಪೆಯಿಂದ ಬೆಂಕಿ ಇತರೆ ಕಟ್ಟಡಗಳಿಗೆ ವ್ಯಾಪಿಸಿಲ್ಲ, ಅವರು ಮಾಡಿರುವ ಸತ್ಕಾರ್ಯವೇ ಅವರನ್ನು ರಕ್ಷಿಸಿದೆ ಎನ್ನುತ್ತಾರೆ ಸ್ಥಳೀಯರು.

Leave a Response

error: Content is protected !!