ಹಿಂದೂ ಧರ್ಮದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು, ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಲೈಂಗಿಕ ದೌರ್ಜನ್ಯ ಎಸಗಿ ಹಾಗೂ ಮತಾಂತರಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕರ್ಜಗಿ ಗ್ರಾಮದ ಮೆಹಬೂಬಅಲಿ ಬಾಬುಸಾಬ್ ನದಾಫ್ (28), ಈತನ ಸ್ನೇಹಿತ ಸೋಯೆಲಸಾಬ್ ಖಾಸೀಮಸಾಬ (20) ವಿರುದ್ಧ ಪ್ರಕರಣ ದಾಖಲಾಗಿದೆ. ಮೆಹಬೂಬಅಲಿ 16 ವರ್ಷದ ಬಾಲಕಿ ಕಾಲೇಜಿಗೆ ಹೋಗುವಾಗ, ಬರುವಾಗ ಅಡ್ಡಗಟ್ಟಿ ನಿಂತು ಮತಾಂತರವಾಗುವಂತೆ ಪೀಡಿಸುತ್ತಿದ್ದ. ಸೋಮವಾರ ಸ್ನೇಹಿತ ಸೋಯೆಲಸಾಬ್‌ನನ್ನು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಅಪಹರಿಸಿದ್ದ. ಶ್ರೀರಾಮ ಸೇನೆ ಕಾರ್ಯಕರ್ತರು ಇಬ್ಬರನ್ನೂ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
add a comment