ರಾಜ್ಯ

ಪುತ್ತೂರು : ಸ್ಕೂಲ್ ಬಸ್ ಮತ್ತು ಕಾ‌ರ್ ನಡುವೆ ಡಿಕ್ಕಿ

ಪುತ್ತೂರು : ಕಾರು ಹಾಗೂ ಸ್ಕೂಲ್ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಒಬ್ಬರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಮಂಜಲ್ಪಡ್ಡು ಎಂಬಲ್ಲಿ ಇಂದು ನಡೆದಿದೆ.

ಅಪಘಾತದ ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡಿದ್ದು ಏರ್ ಬ್ಯಾಗ್ ತೆರೆದುಕೊಂಡಿದೆ. ಈ ಸಂದರ್ಭ ಹಿಂಬದಿ ಇದ್ದ ಪಿಕಪ್ ವಾಹನಕ್ಕೆ ಇನೋವ ಕಾರು ಕೂಡ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Response

error: Content is protected !!