ರಾಜ್ಯ

ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹಣ ಪಡೆದು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯದ ಜಾಲ್ಸೂರಿನ 25 ವರ್ಷ ಪ್ರಾಯದ ಮಹಿಳೆ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಗೃಹಣಿಯಾಗಿದ್ದು, ಜ.19ರಂದು ಕೃಪಾದಿಶಾ ಎಂಬ ಟೆಲಿಗ್ರಾಂ ಖಾತೆಯಿಂದ ಆನ್‌ಲೈನ್ ಪಾರ್ಟ್ಟೈಮ್ ಜಾಬ್ ನೀಡುವುದಾಗಿ ಹೇಳಿ, ಈ ಬಗ್ಗೆ ವಿವಿಧ ವಿಚಾರಗಳನ್ನು ತಿಳಿಸಿ, ಅದರಂತೆ ಮುಂದುವರಿಯಲು ತಿಳಿಸಿದ್ದಾರೆ. ಟಾಸ್ಕ್ ಕಂಪ್ಲಿಟ್ ಮಾಡಿದಲ್ಲಿ ಬೋನಸ್ ಸಹಿತ ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಮಹಿಳೆ ಜ.21ರಂದು ರೂ.10 ಸಾವಿರ ಹಾಕಿದ್ದು, ಅದರಲ್ಲಿ ರೂ.14,851 ಹಣ ಮಹಿಳೆಯ ಖಾತೆಗೆ ಜಮೆಯಾಗಿದೆ. ನಂತರ ಇದೇ ರೀತಿಯಾಗಿ ಹಂತಹಹಂತವಾಗಿ ಮಹಿಳೆ ಹಾಗೂ ಇನ್ನೋರ್ವರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆದರೆ ಬಳಿಕದಲ್ಲಿ ಮಹಿಳೆಗೆ ಯಾವುದೇ ಹಣ ವಾಪಾಸ್ ನೀಡದೇ ರೂ. 6,57,486 ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಸಿಇಎನ್ (ಸೆನ್) ಅಪರಾಧ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Response

error: Content is protected !!