ರಾಜ್ಯ

ನಂಜನಗೂಡು: ಬಸ್ ನಿಂದ ತಲೆ ಹೊರಹಾಕಿದ ಮಹಿಳೆ – ಟಿಪ್ಪರ್ ಓವರ್ ಟೇಕ್ ವೇಳೆ ಕುತ್ತಿಗೆ ಕಟ್

ನಂಜನಗೂಡು: ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಮಹಿಳೆಯೊಬ್ಬರು ತಲೆಯನ್ನು ಹೊರಗೆ ಹಾಕಿದ ವೇಳೆ ಟಿಪ್ಪರ್ ಒಂದು ಓವರ್ ಟೇಕ್ ಮಾಡಿದ್ದು, ಮಹಿಳೆಯ ಕುತ್ತಿಗೆ ಮತ್ತು ಕೈ ತುಂಡಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಬೇಗೂರು ಸಮೀಪದ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ (43) ಎಂದು ಗುರುತಿಸಲಾಗಿದೆ. ಮೈಸೂರು-ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಮಹಿಳೆ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.

ಸಿಂಧುವಳ್ಳಿ ಗ್ರಾಮದ ಬಳಿ ಬಸ್ಸಿನ ಕಿಟಕಿಯಿಂದ ಆಕೆ ಕತ್ತನ್ನು ಹೊರಹಾಕಿದ್ದ ಸಂದರ್ಭ ಬಾರಿ ಗೂಡ್ಸ್ ವಾಹನ ಮತ್ತು ಸಾರಿಗೆ ಬಸ್ ನಡುವೆ ಕ್ಷಣಾರ್ಧದಲ್ಲಿ ಅಪಘಾತವಾದ ಪರಿಣಾಮ ಬಸ್ಸಿನಲ್ಲಿ ಕುಳಿತಿದ್ದ ಶಿವಲಿಂಗಮ್ಮ ಎಂಬವರ ಕುತ್ತಿಗೆ ಮತ್ತು ಕೈ ತುಂಡಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Response

error: Content is protected !!