ಮನೆಯ ಹೊರಗಿನ ಅರ್ತ್ ತಂತಿಯಿಂದ ವಿದ್ಯುತ್ ಶಾಕ್ ತಗುಲಿ ಮೂರೂವರೆ ವರ್ಷದ ಮಗು ಸಾವಿಗೀಡಾದ ಘಟನೆ ಗಾಳಿಮುಖದಲ್ಲಿ ನಡೆದಿದೆ.
ಗಾಳಿಮುಖ ನಿವಾಸಿ ಶಿನ್ಸಾದ್ ಅವರ ಪುತ್ರ ಝೈನ್ ಸಾವಿಗೀಡಾದ ಬಾಲಕ. ಡಿ.29 ರಂದು ಸಂಜೆ 4 ಗಂಟೆಗೆ ಮನೆಯ ಹೊರಗೆ ಆಟ ಆಡುತ್ತಿದ್ದಾಗ ಅರ್ತ್ ತಂತಿಯನ್ನು ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದೆ. ವಿಷಯ ತಿಳಿದು ಮಗುವಿನ ಅಜ್ಜ ಮುಹಮ್ಮದ್ ಶಾಫಿ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಗುವನ್ನು ರಕ್ಷಿಸಲು ಯತ್ನಿಸಿದ ವೇಳೆ ಅಸ್ವಸ್ಥಗೊಂಡ ಮುಹಮ್ಮದ್ ಶಾಫಿ ಅವರನ್ನು ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನವರಿ 4ರಂದು ಶಿನ್ಸಾದ್ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಅದರ ಸಿದ್ಧತೆಗಳು ನಡೆಯುತ್ತಿತ್ತು. ಹೀಗಿರುವಂತೆ ಮಗು ಸಾವಿಗೀಡಾಗಿದೆ.
add a comment