![](https://newsroomfirst.com/wp-content/uploads/2025/02/50C28291-342D-47F6-B3CC-FDB0A5D2F566.jpeg)
![](https://newsroomfirst.com/wp-content/uploads/2025/02/50C28291-342D-47F6-B3CC-FDB0A5D2F566.jpeg)
ಮೂಲ್ಕಿ : ಇಲ್ಲಿನ ಪಕ್ಷಿಕೆರೆ ಬಳಿ ನ್ಯಾಯಾಧೀಶರೊಬ್ಬರಿಗೆ ಸೇರಿದ ಪ್ಲಾಟ್ಗೆ ನುಗ್ಗಿದ ಕಳ್ಳರು, ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ಬುಧವಾರ ಬೆಳಕಿಗೆ ಬಂದಿದೆ.
ಪಕ್ಷಿಕೆರೆ ನಿವಾಸಿ ಮಮ್ತಾಜ್ ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಆಗಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇಲ್ಲಿನ ಕೊಕುಡೆ ಬಹು ಮಹಡಿ ಕಟ್ಟಡದಲ್ಲಿ ಫ್ಲಾಟ್ ಹೊಂದಿದ್ದಾರೆ.15 ದಿನಗಳಿಗೊಮ್ಮೆ ಮಂಗಳೂರಿಗೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಕಳ್ಳರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಫ್ಲಾಟ್ ಹೊರಗಿನ ಸಿಸಿ ಕ್ಯಾಮೆರಾವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿ, ಮುಖ್ಯ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು, ಮನೆಯ ಒಳಗಿನ ನಾಲ್ಕೂ ಕೋಣೆಗಳನ್ನು ಜಾಲಾಡಿದ್ದಾರೆ. ಆದರೆ, ಮನೆಯ ಒಳಗೆ ರಹಸ್ಯ ಸ್ಥಳದಲ್ಲಿ ಚಿನ್ನಾಭರಣ ಹಾಗೂ ನಗದು ಇರಿಸಿದ್ದರಿಂದ ಕಳ್ಳರ ಕೈಗೆ ಸಿಗದೆ ಸುರಕ್ಷಿತವಾಗಿದೆ.
ಮಂಗಳೂರು ಎಸಿಪಿ ಶ್ರೀಕಾಂತ್, ಮೂಲ್ಕಿ ಸಬ್ಇನ್ಸ್ಪೆಕ್ಟರ್ ಅನಿತಾ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.