ರಾಜ್ಯ

ಮಂಗಳೂರಿನ ಕಡಲತೀರದಲ್ಲಿ ಮತ್ತೆ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಒಲೀವ್ ರಿಡ್ಲೆ ಆಮೆಗಳು

ಮಂಗಳೂರು : ಅಳಿವಿನಂಚಿನಲ್ಲಿರುವ ಒಲೀವ್ ರಿಡ್ಲೆ ಸಮುದ್ರ ಆಮೆಗಳು ಈ ವರ್ಷವೂ ಮಂಗಳೂರು ಕಡಲತೀರದಲ್ಲಿ ಕಾಣಿಸಿಕೊಂಡಿದ್ದು, ಮೊಟ್ಟೆಗಳನ್ನು ಇಟ್ಟಿವೆ.

ನಗರದ ಹೊರವಲಯದ ಸಸಿಹಿತ್ಲು ಕಡಲ ತೀರಕ್ಕೆ ಆಮೆಗಳು ಬಂದಿದ್ದು, ದಡದಲ್ಲಿ ಗೂಡುಗಳನ್ನು ನಿರ್ಮಿಸಿವೆ. ಆಮೆಗಳು ಮೊಟ್ಟೆಗಳನ್ನು ಇಡಲು ದಡಕ್ಕೆ ಬರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ.

ಈ ಹಿಂದೆ ತಣ್ಣೀರುಬಾವಿ, ಸಸಿಹಿತ್ಲು ಮತ್ತು ಬೆಂಗ್ರೆ ಸೇರಿದಂತೆ ಮಂಗಳೂರು ಬಳಿಯ ಸುಮಾರು 12 ಸ್ಥಳಗಳಲ್ಲಿ ಆಮೆ ಗೂಡುಗಳು ಕಂಡುಬಂದಿದ್ದವು.

ಒಲೀವ್ ರಿಡ್ಲೆ ಸಮುದ್ರ ಆಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1 ರ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಲೀವ್ ರಿಡ್ಲೆ ಕಡಲಾಮೆಗಳ ವಿಶೇಷವೆಂದರೆ ತಾವು ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.

Leave a Response

error: Content is protected !!