![](https://newsroomfirst.com/wp-content/uploads/2025/01/DBF94095-5B8D-4812-ABE7-66788720C408.jpeg)
![](https://newsroomfirst.com/wp-content/uploads/2025/01/DBF94095-5B8D-4812-ABE7-66788720C408.jpeg)
ಮಂಗಳೂರಿನ ಬಲ್ಮಠ ಕ್ರೀಡಾಂಗಣದ ಬಳಿ ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಘಟನೆ ನಡೆದಿದೆ. ಮರ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆಯೇ ಉರುಳಿದ್ದು, ಮೆಸ್ಕಾಂಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಮರ ಬಿದ್ದ ಜಾಗದಲ್ಲಿ ನಿಲ್ಲಿಸಿದ್ದ ಆಟೋ ಹಾಗೂ ಕೆಲವು ವಾಹನಗಳಿಗೆ ಹಾನಿ ಆಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮರ ಬಿದ್ದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.ಸ್ಥಳಕ್ಕೆಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
add a comment