ಮಂಗಳೂರು: ಮಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆಯೊಬ್ಬರನ್ನು ಇಬ್ಬರು ಯುವಕರು ಕಾರಿನಲ್ಲಿ ಹಿಂಬಾಲಿಸಿ ಬೆದರಿಸಿ, ಭಯ ಹುಟ್ಟಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೀಶ್ ಮತ್ತು ಸಿಂಚನ್ ಕುಂದರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ಮಹಿಳೆಯಿದ್ದ ಆಟೋವನ್ನು ಹಿಂಬಾಲಿಸಿಕೊಂಡು ಹೋಗುವಾಗ ತೆಗೆದ ಫೋಟೋಗಳು, ಮಹಿಳೆ ಕೋರ್ಟ್‌ನಲ್ಲಿ ಇದ್ದಾಗ ತೆಗೆದ ಫೋಟೋಗಳು ಸೇರಿದಂತೆ ಮಹಿಳೆಗೆ ಸಂಬಂಧಿಸಿದ ಇತರ ಫೋಟೋಗಳು, ವೀಡಿಯೋಗಳು ಪತ್ತೆಯಾಗಿದೆ.
ವಾಟ್ಸಾಪ್ ಪರಿಶೀಲನೆ ನಡೆಸಿದಾಗ ಮಹಿಳೆಯ ಗಂಡ ಎಡ್ಮಂಡ್ ಫೆರ್ನಾಂಡಿಸ್, ಆರೋಪಿಗಳಲ್ಲಿ ಓರ್ವನಾಗಿರುವ ಯೋಗೀಶ್‌ನ ಜತೆ ನಡೆಸಿರುವ ಚಾಟಿಂಗ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ಆತನಿಗೆ ಹಣ ಪಾವತಿ ಮಾಡಿರುವುದು, ಹಿಂಬಾಲಿಸಿಕೊಂಡು ಹೋಗುವಂತೆ ಸೂಚಿಸಿರುವ ಮಾಹಿತಿಗಳು ಕೂಡಾ ಪೊಲೀಸರಿಗೆ ಲಭ್ಯವಾಗಿದೆ. ಬಂದರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.