ರಾಜ್ಯ

ಮಂಗಳೂರು : ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದ ಕಾರು

ಮಂಗಳೂರು: ಬಂಗ್ರಕೂಳೂರಿನ ಫೋರ್ತ್‌ಮೈಲ್‌ ಬಳಿ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಕಾರೊಂದು ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ಸಂಜೆ ವೇಳೆ ಈ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಏರ್‌ಬ್ಯಾಗ್‌ ತೆರೆದುಕೊಂಡ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನಲ್ಲಿದ್ದವರು ಹರಿಯಾಣ ಮೂಲದವರಾಗಿದ್ದು, ಕೊಟ್ಟಾರ ಪರಿಸರದಲ್ಲಿ ವಾಸವಿರುವವರಾಗಿದ್ದಾರೆ.

Leave a Response

error: Content is protected !!