ರಾಜ್ಯ

ಮಂಗಳೂರು: ಕದ್ರಿ ಪಾರ್ಕ್‌ನಲ್ಲಿ ಕಲಾಲೋಕ ವೈಭವ

ಮಹಾನಗರ: ಮಂಗಳೂರಿನ ಶರಧಿ ಪ್ರತಿಷ್ಠಾನ, ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ಸಹಯೋಗದೊಂದಿಗೆ ಕದ್ರಿಪಾರ್ಕ್‌ನಲ್ಲಿ ನಡೆಯುವ ಎರಡು ದಿನಗಳ ಕಲಾಪರ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕದ್ರಿ ಪಾರ್ಕ್‌ ರಸ್ತೆಯಲ್ಲಿ ಅನಾವರಣಗೊಂಡ ಕಲಾ ಜಗತ್ತು ಕಲಾ ರಸಿಕರ ಮನ ತಣಿಸುತ್ತಿದೆ. ಕಲಾಪರ್ಬದಲ್ಲಿ 118 ಮಳಿಗೆಗಳಿವೆ.

ವಿನೂತನ ಕಲಾ ಪ್ರದರ್ಶನಗಳುಆಯಿಲ್‌ ಪೈಂಟಿಂಗ್‌, ಪೆನ್ಸಿಲ್‌ ಆರ್ಟ್‌, ಅಕ್ರೇಲಿಕ್‌, ಲೈನ್‌ ಆರ್ಟ್‌, ಸಿರಾಮಿಕ್‌ ಆರ್ಟ್‌, ಪೊರ್ಟ್ರೇಟ್‌, ನೇಚರ್‌ ಪೈಂಟಿಂಗ್‌ ಇತ್ಯಾದಿಗಳು ಗಮನ ಸೆಳೆಯುತ್ತಿವೆ. ಗೃಹಿಣಿಯರು ಮನೆಯಲ್ಲೇ ತಯಾರಿಸಿದ ಆಕರ್ಷಕ ಕೈಮಗ್ಗದ ಅಲಂಕಾರಿಕ ವಸ್ತುಗಳು ಕಲಾಪರ್ಬದಲ್ಲಿವೆ. ಕೂಳೂರು ಮೂಲದ ಗೃಹಣಿಯೊಬ್ಬರು ರಚಿಸಿರುವ ಅಲಂಕಾರಿಕೆಗಳು ಗಮನ ಸೆಳೆಯುತ್ತಿವೆ. ಅನೇಕ ಮಹಿಳೆಯರು ಮನೆಯಲ್ಲಿ ತಯಾರಿಸಿದ ಕಸೂತಿ ವಸ್ತುಗಳ ಮಳಿಗೆ ಕಲಾಪರ್ಬದಲ್ಲಿವೆ.

ಕಲೆಗೆ ವಿಶೇಷ ಶಕ್ತಿ ಇದೆ: ಶಾಸಕ ಕಾಮತ್‌ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು, ಕಲೆಗೆ ಗತಕಾಲದ ವಿಚಾರ ತಿಳಿಸುವ ವಿಶೇಷ ಶಕ್ತಿ ಇದ್ದು, ಸಂಸ್ಕೃತಿ ಉಳಿವಿಗೆ ಹಿರಿಯರು ನೀಡಿದ ಕೊಡುಗೆ ಸ್ಮರಿಸಲು ಕಲಾ ಪ್ರದರ್ಶನ ವೇದಿಕೆಯಾಗಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪೂಜಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸಿಇಒ ಡಾ| ಆನಂದ್‌, ಜಿಲ್ಲಾ ಎಸ್‌ಪಿ ಯತೀಶ್‌ ಎನ್‌., ಕಾರ್ಪೋರೆಟರ್‌ ಶಕೀಲಾ ಕಾವ, ಉದ್ಯಮಿ ಲಾಂಚುಲಾಲ್‌ ಕೆ.ಎಸ್‌., ಪ್ರಮುಖರಾದ ಕೋಟಿ ಪ್ರಸಾದ್‌ ಆಳ್ವ, ಬಿ.ಪಿ. ಮೋಹನ್‌ ಕುಮಾರ್‌, ಡಿ. ರಮೇಶ್‌ ನಾಯಕ್‌, ಪುನೀಕ್‌ ಶೆಟ್ಟಿ, ದಿನೇಶ್‌ ಹೊಳ್ಳ, ಮೋಹನ್‌ ಉಪಸ್ಥಿತರಿದ್ದರು. ಚೇತನ್‌ ಶೆಟ್ಟಿ ನಿರೂಪಿಸಿದರು.

-ಸಿ.ಇ. ಕಾಮತ್‌ ಕುಶಲಕರ್ಮಿಗಳ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಮರ, ಲೋಹ ಹಾಗೂ ಕಲ್ಲಿನಿಂದ ತಯಾರಿಸಿದ ಶಿಲ್ಪಗಳು.-ಪ್ರಶಾಂತ್‌ ಆಚಾರ್ಯ ಅವರು ಪೆನ್ಸಿಲ್‌ ಲೆಡ್‌ನ‌ಲ್ಲಿ ತಯಾರಿಸಿರುವ ಸೂಕ್ಷ್ಮ ಕಲಾಕೃತಿ-ಪಡುಬಿದ್ರಿಯ ರೂಪಾ ಅವರು ವಿವಿಧ ಎಲೆಗಳಿಂದ ವೈವಿಧ್ಯಮಯ ಕಲಾ ಪ್ರಕಾರ ಸೃಷ್ಟಿಸಿದ್ದಾರೆ.-ಚಿತ್ರಾಪುರದ ಪದ್ಮಾ ಕರ್ಕೇರ ಚಿಪ್ಪುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ.-ಬಿಜೈನ ಜೇನ್‌ ನೊರೋನ್ಹಾ ಅವರು ಕಾಫಿ ಪುಡಿಯಲ್ಲಿ ರಚಿಸಿರುವ ಕಲಾಕೃತಿಗಳು..ಪೇಪರ್‌ ಕೊಲಾಜ್‌ ಮೂಲಕ ಜಾಗೃತಿಶ್ರೀನಿವಾಸ್‌ ಕಾಲೇಜಿನ ವಿದ್ಯಾರ್ಥಿಗಳು ಹಳೇ ಪತ್ರಿಕೆಗಳನ್ನು ಬಳಸಿಕೊಂಡು ಪ್ರತಿಕೃತಿ ರಚಿಸಿದ್ದಾರೆ.

ಅದರ ಮೂಲಕ ಸಾರ್ವಜನಿಕ ಜಾಗದಲ್ಲಿ ಎಸೆದ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

Leave a Response

error: Content is protected !!