![](https://newsroomfirst.com/wp-content/uploads/2025/01/1001083590.webp)
![](https://newsroomfirst.com/wp-content/uploads/2025/01/1001083590.webp)
ಹೊಸಪೇಟೆ: ಮಕರ ಸಂಕ್ರಾಂತಿ ಪ್ರಯುಕ್ತ ದಕ್ಷಿಣ ಕಾಶಿ ಖ್ಯಾತಿಯ ಹಂಪಿಗೆ ಸಹಸ್ರಾರು ಭಕ್ತರು ಮಂಗಳವಾರ ಭೇಟಿ ನೀಡಿ, ವಿರೂಪಾಕ್ಷೇಶ್ವರ, ಪಂಪಾದೇವಿ ದರ್ಶನ ಪಡೆದರು.
ಮಕರ ಸಂಕ್ರಾತಿ ಹಿನ್ನೆಲೆಯಲ್ಲಿ ತಂಡೋಪತಂಡವಾಗಿ ಹಂಪಿಗೆ ಆಗಮಿಸಿದ ಭಕ್ತರು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರುಬಳಿಕ ವಿರೂಪಾಕ್ಷೇಶ್ವರ ದೇವಾಲಯಕ್ಕೆ ತೆರಳಿ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಹೂ, ಹಣ್ಣು,ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಬಳಿಕ ಪರಿವಾರದೊಂದಿಗೆ ಸೇರಿ ನದಿ ತಟದಲ್ಲಿ ಸಹಭೋಜನ ಸವಿದರು.
ಹಂಪಿಯ ಏಕಶಿಲಾ ಬಡವಿಲಿಂಗ ಬೃಹತ್ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆರ್ಚಕ ರಾಘವ ಭಟ್ ಬಡವಿಲಿಂಗ ಮೂರ್ತಿಗೆ ಜಲಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು.
![](https://newsroomfirst.com/wp-content/uploads/2025/01/1001083591.jpg)
ವಿಠಲದೇವಾಲಯ, ಹಜಾರರಾಮ ದೇವಾಲಯ, ಕಮಲ ಮಹಲ್, ರಾಣಿ ಸ್ನಾನ ಗೃಹ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ,ಗಜಶಾಲೆ, ಉಗ್ರನರಸಿಂಹ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದರು.