ರಾಜ್ಯ

ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು – ನೂರಾರು ಎಕರೆಯಷ್ಟು ಅರಣ್ಯ ಭಸ್ಮ

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದು ಬಂದಿಲ್ಲ.

ಕಾಡ್ಗಿಚ್ಚಿನಿಂದ ಪ್ರಾಣಿಸಂಕುಲ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿರುವ ಅಪಾಯ ಎದುರಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಸಮೀಪದಲ್ಲಿದ್ದು, ಅಲ್ಲಿಗೂ ಬೆಂಕಿ ವ್ಯಾಪಿಸುವ ಭೀತಿ ಇದೆ. ಚಾರ್ಮಾಡಿ ಘಾಟಿಯಲ್ಲಿಹೆಚ್ಚಾಗಿ ಬೇಸಿಗೆಯಲ್ಲಿ ಪ್ರತಿ ವರ್ಷ ಬೆಂಕಿ ಅನಾಹುತ ಉಂಟಾಗುತ್ತಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯು ಬೆಂಕಿಯನ್ನು ನಿಂದಿಸಲು ಹರಸಾಹಸ ಮಾಡುತ್ತಿದ್ದಾರೆ. ಉತ್ತಮ ಗಾಳಿಯಿರುವುದರಿಂದ ಬೆಂಕಿಯು ವೇಗವಾಗಿ ಹರಡುತ್ತಿದೆ. ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಬೆಂಕಿ ನಂದಿಸಲು ನೆರವಾಗುತ್ತಿದ್ದಾರೆ.

Leave a Response

error: Content is protected !!