ರಾಜ್ಯ

BBK11: ಫಿನಾಲೆಗೂ ಮುನ್ನ ವಿನ್ನರ್‌ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ -11 (Bigg Boss Kannada-11) ರ ಫಿನಾಲೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಫಿನಾಲೆಗೆ ದಿನ ಹತ್ತಿರವಾಗುತ್ತಿದ್ದಂತೆ ವಿನ್ನರ್‌ ಯಾರು ಎನ್ನುವುದರ ಬಗ್ಗೆ ಪ್ರಶ್ನೆಯ ಜತೆ ಕುತೂಹಲ ಹೆಚ್ಚಾಗಿದೆ.

ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಯಿಂದ ಆಚೆ ಹೋಗಿದ್ದಾರೆ. ಚೈತ್ರಾ ಆಚೆ ಹೋದ ಬಳಿಕ ಬಿಗ್‌ ಬಾಸ್‌ ಸೆಮಿ ಫೈನಲ್‌ ಆಟ ಶುರುವಾಗಿದೆ. ಈ ವಾರ ವಾರದ ಮಧ್ಯದಲ್ಲೇ ಒಬ್ಬರು ಸ್ಪರ್ಧಿ ಮನೆಯಿಂದ ಆಚೆ ಬರಲಿದ್ದಾರೆ. ಟಾಸ್ಕ್‌ನಲ್ಲಿ ಗೆಲ್ಲುವವರು ಮಿಡ್‌ ವೀಕ್‌ ಎಲಿಮಿನೇಷನ್ ನಿಂದ ಪಾರಾಗಲಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಟ್ರೋಫಿ ಮೇಲೆ ಹಲವು ಸ್ಪರ್ಧಿಗಳು ಕಣ್ಣಿಟ್ಟಿದ್ದಾರೆ. ಆದರೆ ಟ್ರೋಫಿ ಒಬ್ಬರಿಗೆ ಮಾತ್ರ ಸಿಗಲಿದೆ. ಹನುಮಂತು ʼಟಿಕೆಟ್ ಟು ಫಿನಾಲೆʼ ಟಾಸ್ಕ್‌ ಗೆದ್ದು‌ ಫಿನಾಲೆಗೆ ಹೋಗಿದ್ದಾರೆ. ಅವರೊಂದಿಗೆ ಇನ್ನು ಯಾರೆಲ್ಲ ಫಿನಾಲೆ ವೇದಿಕೆ ಹತ್ತಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲವಿದೆ.

ರಜತ್‌, ತ್ರಿವಿಕ್ರಮ್‌ ಅವರು ಫಿನಾಲೆಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಇನ್ನುಳಿದವರ ನಡುವೆ ತೀವ್ರ ಪೈಪೋಟಿ ಸಾಗಲಿದೆ.

Leave a Response

error: Content is protected !!