ರಾಜ್ಯ

ಬೆಳ್ಳಾರೆ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ದಾಳಿ ಆರೋಪ; ಆಸ್ಪತ್ರೆಗೆ ಯುವಕ ದಾಖಲು

ಬೆಳ್ಳಾರೆ ಪೇಟೆಯಲ್ಲಿ ತಂಡವೊಂದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಗಂಭಿರ ಗಾಯಗೊಳಿಸಿದ ಘಟನೆಯೊಂದು ಜ.11 ರ ರಾತ್ರಿ ನಡೆದಿದೆ. ಗಾಯಗೊಂಡ ಯುವಕನನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳ್ಳಾರೆ ಪೇಟೆಯಲ್ಲಿ ರಾತ್ರಿ ಸಮಯದಲ್ಲಿ ಆಶೀರ್‌ ಎಂಬ ಯುವಕ ಬೈಕ್‌ನಲ್ಲಿ ಬರುತ್ತಿದ್ದಾಗ ಕಬ್ಬಿಣದ ರಾಡ್‌ ಮೂಲಕ ತಲೆಗೆ ಹೊಡೆದು ಕೊಲೆಗೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೊಲೆಯತ್ನವನ್ನು ಅಜರುದ್ದೀನ್‌ ಮತ್ತು ಜಮಾಲ್‌ ಬೆಳ್ಳಾರೆ ಎಂಬುವವರು ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ಆಶೀರ್‌ನನ್ನು ಬೆಳ್ಳಾರೆ ಪೊಲೀಸರು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.

Leave a Response

error: Content is protected !!