ರಾಜ್ಯ

ಬಂಟ್ವಾಳ : ‘ನೆತ್ತರಕೆರೆ’ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ

ಬಂಟ್ವಾಳ: ಸಿನಿಮಾ ಚಿತ್ರೀಕರಣದ ಸೆಟ್‌ ನಲ್ಲಿ ಬೆಂಕಿ ಅವಘಡವಾದ ಘಟನೆ ಮಂಗಳೂರು ಹೊರವಲಯದ ಬೆಂಜನಪದವು ಎಂಬಲ್ಲಿ ನಡೆದಿದೆ.

ಕಾಂತಾರ ಸಿನಿಮಾದ ಗುರುವ ಪಾತ್ರಧಾರಿಯಾಗಿದ್ದ ಸ್ವರಾಜ್ ಶೆಟ್ಟಿಯವರು ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿರುವ ʼನೆತ್ತರಕೆರೆʼ ಹೆಸರಿನ ತುಳು ಹಾಗೂ ಕನ್ನಡ ಸಿನಿಮಾದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

ಸಿನಿಮಾ ಚಿತ್ರೀಕರಣಕ್ಕಾಗಿ ಹಾಕಿದ್ದ ಬಾರ್‌ ಸೆಟ್‌ನಲ್ಲಿ ಶೂಟಿಂಗ್‌ ನಡೆಯುತ್ತಿರುವಾಗಲೇ ಬೆಂಕಿ‌ ಕಾಣಿಸಿಕೊಂಡಿದೆ. ಬಾರ್‌ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವ ದೃಶ್ಯ ಚಿತ್ರೀಕರಣವಾಗುತ್ತಿದ್ದ ವೇಳೆ ಬಾಣಲೆಯಲ್ಲಿದ್ದ ಎಣ್ಣೆಗೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು ಪಕ್ಕದಲ್ಲಿದ್ದ ಬಟ್ಟೆಗಳಿಗೆ ಬೆಂಕಿ ತಗುಲಿ ಇಡೀ ಸೆಟ್ ಗೆ ಬೆಂಕಿ ಆವರಿಸಿದೆ. ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಚಿತ್ರ ತಂಡ ಅಂದಾಜಿಸಿದೆ.

Leave a Response

error: Content is protected !!