ರಾಜ್ಯ

ಬಂಟ್ವಾಳ : ಹಾಡಹಗಲೇ ಮನೆಯಿಂದ ನಗದು ಕಳವು

ಬಂಟ್ವಾಳ: ಮನೆಮಂದಿ ಮನೆಗೆ ಬೀಗ ಹಾಕದೆ ತೋಟಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳನೋರ್ವ ಕೋಣೆಯ ಶೆಲ್ಫ್ ನಲ್ಲಿಟ್ಟಿದ್ದ 50 ಸಾವಿರ ರೂ.ಗಳ ನೋಟಿನ ಕಟ್ಟನ್ನು ಕಳವು ಮಾಡಿದ ಘಟನೆ ಡಿ. 28ರಂದು ಸಂಜೆ 5.30ರ ಸುಮಾರಿಗೆ ಬಂಟ್ವಾಳದ ಅಂತರ ಮಣಿಗುತ್ತಿನಲ್ಲಿ ನಡೆದಿದೆ.

ಅಂತರ ಮಣಿಗುತ್ತು ನಿವಾಸಿ ಪೂರ್ಣಿಮಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಂಜೆ 5.45ರ ಸುಮಾರಿಗೆ ಮನೆಯ ಬಳಿ ನಾಯಿಗಳು ಬೊಗಳುವ ಶಬ್ದ ಕೇಳಿದ್ದು, ಆಗ ಅವರ ಜತೆಯಲ್ಲಿದ್ದ ಧನುಷ್‌ ಮನೆಗೆ ಬಂದಾಗ ಅಪರಿಚಿತ ವ್ಯಕ್ತಿ ಮನೆಯ ಒಳಗಿನಿಂದ ಪ್ಲಾಸ್ಟಿಕ್‌ ಬಾಕ್ಸ್‌ ಹಿಡಿದುಕೊಂಡು ಓಡುತ್ತಿದ್ದಾಗ ಬಾಕ್ಸ್‌ನಲ್ಲಿದ್ದ 500 ರೂ.ಗಳ 4 ಕಟ್ಟುಗಳು ನೆಲಕ್ಕೆ ಬಿದ್ದಿದೆ. ಅದರಲ್ಲಿ 1 ಕಟ್ಟನ್ನು ಆತ ಹೆಕ್ಕಿ ಪರಾರಿಯಾಗಿದ್ದಾನೆ. ಈ ವೇಳೆ ಧನುಷ್‌ ಬೊಬ್ಬೆ ಹಾಕಿದ್ದು, ತೋಟದಲ್ಲಿದ್ದ ಪೂರ್ಣಿಮಾ ಕೂಡ ಓಡಿ ಬಂದಿದ್ದಾರೆ.

ಪೂರ್ಣಿಮಾ ಅವರ ಪತಿ ಸಿಲ್ವೆಸ್ಟರ್‌ ಡಿ’ಸೋಜಾ ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಅದರ ವಿಮೆ ಹಣ ಹಾಗೂ ಅಡಿಕೆ ಮಾರಾಟ ಮಾಡಿದ ಸಿಕ್ಕಿದ ಹಣವನ್ನು ಸೇರಿಸಿ 2 ಲಕ್ಷ ರೂ.ಗಳನ್ನು ಮನೆಯಲ್ಲಿಟ್ಟಿದ್ದರು. ಕಳ್ಳನು ಅದನ್ನು ಕದ್ದು ಓಡುತ್ತಿದ್ದಾಗ ಧನುಷ್‌ ಬಂದ ಕಾರಣ ಆತನ ಕೈಯಿಂದ ಬಿದ್ದಿದ್ದ 1.50 ಲಕ್ಷ ರೂ.ಗಳು ಮನೆಯವರಿಗೆ ಸಿಕ್ಕಿದೆ.
ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Response

error: Content is protected !!