ಪಡುಬಿದ್ರಿ: ಜಾಂಡೀಸ್ ಬಾಧಿತನಾಗಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ರೋಗಿ ಮತ್ತೆ ಆಸ್ಪತ್ರೆ ಪಾಲಾದ ಘಟನೆ ಎರ್ಮಾಳಿನಲ್ಲಿ ಸಂಭವಿಸಿದೆ.
ನಂದಿಕೂರು ಗ್ರಾಮದ ದರ್ಕಾಸ್ತು ನಿವಾಸಿ ಸುಧೀಂದ್ರ (32) ಅವರು ಫೆ. 1ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಮರಳುತ್ತಿದ್ದಾಗ ಎರ್ಮಾಳು ರಿಕ್ಷಾ ನಿಲ್ದಾಣದ ಬಳಿ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮವಾಗಿ ಸುಧೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಿಕ್ಷಾದಲ್ಲಿದ್ದ ಇತರ ಇಬ್ಬರು ಹಾಗೂ ಚಾಲಕನಿಗೂ ಗುದ್ದಿದ ಗಾಯಗಳಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
add a comment