ರಾಜ್ಯ

ಮಂಗಳೂರು: ಬೀಚ್ಗೆ ಹೋಗಿದ್ದ ಮೂವರು ಪ್ರವಾಸಿಗರು ಸಮುದ್ರಪಾಲು, ಓರ್ವ ರಕ್ಷಣೆ

ಮಂಗಳೂರು: ಬೀಚ್‌ಗೆ (Beach) ಪ್ರವಾಸಕ್ಕೆ ಬಂದಿದ್ದ ಮೂವರು ವ್ಯಕ್ತಿಗಳು ಸಮುದ್ರಪಾಲಾಗಿರುವಂತಹ ಘಟನೆ ಮಂಗಳೂರಿನ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಬಳಿ ನಡೆದಿದೆ. ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್​​ ಮತ್ತು ಬೆಂಗಳೂರಿನ‌ ಸತ್ಯವೇಲು ಮೃತರು. ಬೀದರ್‌ನ ಪರಮೇಶ್ವರ್‌ನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇಂಜಿನಿಯರಿಂಗ್ ಮುಗಿಸಿ ಕೆಲಸದ ಕಾರಣಕ್ಕೆ ನಾಲ್ವರು ಮಂಗಳೂರಿಗೆ ಬಂದಿದ್ದರು. ಈಜಬೇಡಿ ಅಂತ ಕರಾವಳಿ ಕಾವಲು ಪಡೆ ಪೊಲೀಸ್ ಎಚ್ಚರಿಕೆ ಕೊಟ್ಟರು ಯುವಕರು ಕ್ಯಾರೇ ಎಂದಿಲ್ಲ. ಮಂಗಳೂರು ಹೊರವಲಯದ ಕುಳಾಯಿಯ ನಿರ್ಮಾಣ ಹಂತದ ಮೀನುಗಾರಿಕಾ ಜೆಟ್ಟಿಯಿಂದ ಸಮುದ್ರಕ್ಕೆ ಹಾರಿದ್ದರು. ಈ ವೇಳೆ ನಾಲ್ವರೂ ನೀರಿನ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.

ಸಮುದ್ರ ಬದಿ ಬಲೆ ಹಾಕುತ್ತಿದ್ದ ಮೀನುಗಾರರಿಂದ ಓರ್ವನ ರಕ್ಷಣೆ ಮಾಡಲಾಗಿದೆ. ಲೈಫ್ ಜಾಕೆಟ್ ಹಿಡಿದುಕೊಂಡು ಈಜಿಕೊಂಡು ಸ್ಥಳೀಯ ಮೀನುಗಾರ ವಿದ್ಯಾಧರ್ ತೆರಳಿ ಓರ್ವನ ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಮೂವರ ಮೃತದೇಹ ಮೇಲಕ್ಕೆತ್ತಿದ್ದಾರೆ.

Leave a Response

error: Content is protected !!