ಕ್ರೀಡೆ

ಮೂರನೇ ಟಿ-20 ಪಂದ್ಯ: ಭಾರತಕ್ಕೆ 26 ರನ್‌ಗಳ ಸೋಲು

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ 26 ರನ್‌ಗಳ ಸೋಲಿಗೆ ಗುರಿಯಾಯಿತು. ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿ 172 ರನ್‌ಗಳ ಗುರಿ ನಿಗದಿ ಮಾಡಿತು. ಇದಕ್ಕೆ ಉತ್ತರವಾಗಿ ಭಾರತ ಕೇವಲ 145 ರನ್‌ಗಳನ್ನು ಕಲೆಹಾಕಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್‌ ವೇಗಿಗಳು ಮಾರಕ ದಾಳಿಯಿಂದ ಭಾರತವನ್ನು ಸಂಕಟಕ್ಕೆ ಸಿಕ್ಕಿಸಿದರು. ಈ ಜಯದ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಸರಣಿಯನ್ನು 1-2ಕ್ಕೆ ತಂದು ನಿಲ್ಲಿಸಿತು. 4ನೇ ಟಿ-20 ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಇದೇ ಜ.31(ಶುಕ್ರವಾರ) ನಡೆಯಲಿದೆ.

Leave a Response

error: Content is protected !!